ನವದೆಹಲಿ: ಬಹುಶಃ ಅತಿಹೆಚ್ಚು ಹೆಚ್ಚು ಟ್ರೋಲ್’ಗೆ ಒಳಗಾದ ನ್ಯಾಯಾಧೀಶ ನಾನು, ಆದರೆ ಯಾವುದಕ್ಕೂ ಎದೆ ಗುಂದಲಿಲ್ಲ ಎಂದು ಸಿಜೆಐ ಚಂದ್ರಚೂಡ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಬಹುಶಃ ಹೆಚ್ಚು ಟ್ರೋಲ್ ಗೆ ಒಳಗಾದ ನ್ಯಾಯಾಧೀಶನಾಗಿದ್ದೇನೆ. ಮುಖಾಲಿಫ್ ಸೆ ಮೇರಿ ಶಕ್ಸಿಯತ್ ಸನ್ವರ್ತಿ ಹೈ ಮೇ ದುಷ್ಮನೋ ಕಾ ಬಡಾ ಎಹ್ತಿರಾಮ್ ಕರ್ತಾ ಹು (ಪ್ರತಿಪಕ್ಷಗಳು ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತವೆ, ನಾನು ನನ್ನ ಶತ್ರುಗಳನ್ನು ತುಂಬಾ ಗೌರವಿಸುತ್ತೇನೆ)” ಎಂದು ಶಾಯಿರಿ ಮೂಲಕ ಪ್ರತಿಕ್ರಿಯೆ ನೀಡಿದರು.
ಮುಂದಿನ ವಾರ ಸೋಮವಾರ ನಾವು ನಿವೃತ್ತಿಯಾಗುತ್ತಿದ್ದೇನೆ.
ಸೋಮವಾರದಿಂದ ನನ್ನನ್ನು ಟ್ರೋಲ್ ಮಾಡಿದವರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಸಿಜೆಐ ಹೇಳಿದರು. ಸಿಜೆಐ ಚಂದ್ರಚೂಡ್ ನವೆಂಬರ್ 10 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.ನಿರ್ಗಮಿತ ಸಿಜೆಐ ಅವರು ಅಯೋಧ್ಯೆ ತೀರ್ಪಿಗೆ ಸಂಬಂಧಿಸಿದಂತೆ ಇತ್ತೀಚಿನ ಹೇಳಿಕೆ ಸೇರಿದಂತೆ ತಮ್ಮ ಕೆಲವು ಸಾರ್ವಜನಿಕ ಹೇಳಿಕೆಗಳಿಗಾಗಿ ಟೀಕೆಗೆ ಗುರಿಯಾಗಿದ್ದರು. ದೀರ್ಘಕಾಲದ ವಿವಾದದ ಪರಿಹಾರಕ್ಕೆ ಸಹಾಯ ಮಾಡುವಂತೆ ದೇವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.ಕೆಲವು ನ್ಯಾಯಪೀಠಗಳಿಗೆ ಕೆಲವು ಜಾಮೀನು ವಿಷಯಗಳನ್ನು ಹಂಚಿಕೆ ಮಾಡಿದ್ದಕ್ಕಾಗಿ ಅವರನ್ನು ಟೀಕಿಸಲಾಗಿದೆ.”ನನ್ನನ್ನು ಟ್ರೋಲ್ ಮಾಡಿದವರೆಲ್ಲರೂ ನಿರುದ್ಯೋಗಿಗಳಾಗುವುದರಿಂದ ಸೋಮವಾರದಿಂದ ಏನಾಗುತ್ತದೆ ಎಂದು ನಾನು ಆಶ್ಚರ್ಯ ಪಡುತ್ತೇನೆ” ಎಂದು ಅವರು ಹೇಳಿದರು.