
ಸರಿಯಾದ ದಿನ ಸರಿಯಾದ ಸಮಯದಲ್ಲಿ ದೇವರುಗಳನ್ನು ಪೂಜಿಸಿದರೆ, ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಜೀವನದಲ್ಲಿ ಹಣದ ಸಮಸ್ಯೆ ಅನುಭವಿಸುತ್ತಿದ್ದರೆ ಈ ಪರಿಹಾರ ಮಾಡಿ.
ಲಕ್ಷ್ಮಿದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯುತ್ತಾರೆ. ಹಾಗಾಗಿ ಲಕ್ಷ್ಮಿದೇವಿಯ ಕೃಪೆ ನಮ್ಮ ಮೇಲಿದ್ದರೆ ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಕಾಡುವುದಿಲ್ಲ. ಹಾಗಾಗಿ ಬುಧವಾರದಂದು ಸಂಜೆ 6 ಗಂಟೆಯೊಳಗೆ ಲಕ್ಷ್ಮಿದೇವಿ ಫೋಟೊಗೆ ಹೂಗಳಿಂದ ಅಲಂಕರಿಸಿ ಬಳಿಕ ಕೆಂಪು ವಸ್ತ್ರದಲ್ಲಿ ಅಡಿಕೆ, ಸ್ವಲ್ಪ ಅಕ್ಕಿ, ಕುಂಕುಮ, ಮತ್ತು ನಾಣ್ಯವನ್ನು ಹಾಕಿ ಗಂಟು ಕಟ್ಟಿ ಲಕ್ಷ್ಮಿದೇವಿಗೆ ಪೂಜೆ ಮಾಡಿ.
ಬಳಿಕ ಆ ಕೆಂಪು ವಸ್ತ್ರದಲ್ಲಿರುವ ಗಂಟನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿ ಅಥವಾ ಮನೆಯ ಬೀರುವಿಗೆ ಕಟ್ಟಿ. ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿಗಳು ನೆಲೆಸುತ್ತವೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯಾಗುತ್ತದೆ.