ಫೋಟೋಗ್ರಫಿಯಲ್ಲಿ ಟೈಮಿಂಗ್ ಮಾಡುವ ಕಲೆ ಸಿದ್ಧಿಸಿದ್ದರೆ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು, ಆ ಚಿತ್ರಗಳಲ್ಲೇ ಕಥೆ ಹೆಣೆಯಬಹುದು.
ಮೆಕ್ಸಿಕೋದ ಬಜಾ ಕ್ಯಾಲಿಫೋರ್ನಿಯಾ ಪ್ರಸ್ಥಭೂಮಿಯಲ್ಲಿ ವೀಕ್ಷಕರ ಗುಂಪೊಂದು ದೋಣಿಯಲ್ಲಿ ಸವಾರಿ ಹೊರಟಿದ್ದ ಸಂದರ್ಭದಲ್ಲಿ, ಅವರ ಹಿಂದಿನಿಂದ ತಿಮಿಂಗಿಲ ತಲೆಯೆತ್ತಿದ್ದು, ಈ ಸಂದರ್ಭವನ್ನು ಕ್ಯಾಮೆರಾ ಕಣ್ಣಿನಲ್ಲಿ ಪರ್ಫೆಕ್ಟ್ ಆಗಿ ಸೆರೆ ಹಿಡಿಯಲಾಗಿದೆ.
ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC ವಿಶೇಷ ಪ್ರವೇಶ ಯೋಜನೆ ಅರ್ಜಿ ಆಹ್ವಾನ
ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಛಾಯಾಗ್ರಾಹಕ ಎರಿಕ್ ಜೆ ಸ್ಮಿತ್, “ತಿಮಿಂಗಿಲ ವೀಕ್ಷಣೆಗೆ ಬಂದಿದ್ದೇವೆ. ಸೆರೆ ಹಿಡಿಯಲು ಬಹಳಷ್ಟಿವೆ ಎಂದು ಮೈಮರೆಯುವುದು ಬಹಳ ಸುಲಭ. ಆದರೆ ಒಂದು ಕ್ಷಣ ನಿಮ್ಮ ಎಚ್ಚರಿಕೆಯನ್ನು ಬಿಟ್ಟರೆ ಏನಾದರೊಂದು ಅದ್ಭುತವಾದದ್ದು ಸಂಭವಿಸುತ್ತದೆ” ಎಂದು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿ ಪ್ರಾಣ ಉಳಿಸಲು ನೆರವಾಯ್ತು ಶ್ವಾನ
ಈ ಛಾಯಾಚಿತ್ರವನ್ನು ಮತ್ತೊಂದು ದೋಣಿಯಿಂದ ಸೆರೆ ಹಿಡಿಯಲಾಗಿದೆ. ದೋಣಿಯಲ್ಲಿದ್ದ ಛಾಯಾಗ್ರಾಹಕರು ಎಲ್ಲೆಲ್ಲೋ ನೋಡುತ್ತಿದ್ದ ವೇಳೆ ಈ ದೈತ್ಯ ತಿಮಿಂಗಿಲ ಹಿಂದಿನಿಂದ ಮೇಲೆದ್ದಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ.