ಹೊಟ್ಟೆನೋವಿನಿಂದ ಬಳಲುತ್ತಿರುವವರು ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಹಾಗೂ 1 ಚಮಚ ಪುದೀನಾ ರಸವನ್ನ ಸೇರಿಸಿ ಕುಡಿಯಬಹುದಾಗಿದೆ. ಇದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸಲಿದೆ.
ವಾಂತಿ ಸಮಸ್ಯೆಗೆ ಪರಿಹಾರ : 2 ಹನಿ ಪುದೀನಾ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನ ಸೇರಿಸಿ ಕುಡಿಯೋದ್ರಿಂದ ವಾಂತಿ ತನ್ನಿಂದ ತಾನೇ ನಿಲ್ಲಲಿದೆ.
ಕೆಮ್ಮು ಹಾಗೂ ಜ್ವರ : ಕಾಳು ಮೆಣಸು, ಬ್ಲಾಕ್ ಸಾಲ್ಟ್ ಹಾಗೂ ಪುದೀನಾ ರಸದಿಂದ ನೀವು ಚಹವನ್ನ ತಯಾರಿಸಿ ಕುಡಿಯೋದಿಂದ ಜ್ವರ ಹಾಗೂ ಕೆಮ್ಮನ್ನ ಹೋಗಲಾಡಿಸಬಹುದು. ತಲೆಗೆ ಪುದೀನಾ ರಸವನ್ನ ಹಚ್ಚಿಕೊಳ್ಳೋದ್ರಿಂದ ತಲೆನೋವು ಸಹ ಶಮನವಾಗಲಿದೆ.
ಇದು ಮಾತ್ರವಲ್ಲದೇ ಅಸ್ತಮಾ ಸಮಸ್ಯೆ ಉಳ್ಳವರು, ಮಾಂಸಖಂಡಗಳಲ್ಲಿ ನೋವನ್ನ ಹೊಂದಿರುವವರು ಪುದೀನಾ ಸೇವನೆ ಮಾಡಬೇಕು. ತ್ವಚೆಯ ಆರೋಗ್ಯ ಕಾಪಾಡಲು ಹಾಗೂ ನೀಳ ಕೇಶರಾಶಿಗಾಗಿಯೂ ಪುದೀನಾವನ್ನ ಸೇವಿಸೋಕೆ ಆರಂಭಿಸಿ.
ಆದರೆ ನೆನಪಿರಲಿ ಅತಿಯಾಗಿ ಪುದೀನಾ ಸೇವನೆಯಿಂದ ಮೂತ್ರಪಿಂಡಗಳಿಗೆ ಹಾನಿ ಉಂಟಾಗಬಹುದು. ಹೀಗಾಗಿ ನಿಯಮಿತ ಪ್ರಮಾಣದಲ್ಲಿಯೇ ಪುದೀನಾ ಸೊಪ್ಪನ್ನ ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.