ಫ್ಲಾಟ್ ಮಾಲಿಕರ ವಾಹನ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಿಐಎಲ್ ವಿಚಾರಣೆ ವೇಳೆ, ಫ್ಲಾಟ್ ಮಾಲೀಕರು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಫ್ಲಾಟ್ ನಲ್ಲಿ ವಾಹನ ನಿಲುಗಡೆ ವಿಷಯದಲ್ಲಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ ನ್ಯಾಯಾಲಯ, ಪಾರ್ಕಿಂಗ್ ಸ್ಥಳವನ್ನು ಹೊಂದಿಲ್ಲದಿದ್ದ ಸಂದರ್ಭದಲ್ಲಿ, ಫ್ಲಾಟ್ ಮಾಲೀಕರಿಗೆ ಒಂದಕ್ಕಿಂತ ಹೆಚ್ಚು ವಾಹನ ನಿಲ್ಲಿಸಲು ಅವಕಾಶ ನೀಡಬಾರದೆಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಹೈಕೋರ್ಟ್ ನ ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರ ಪೀಠವು ಈ ಸೂಚನೆ ನೀಡಿದೆ. ಡೆವಲಪರ್ಸ್, ಫ್ಲಾಟ್ ಮುಂದೆ ವಾಹನ ನಿಲುಗಡೆಗೆ ಜಾಗ ನೀಡ್ತಿಲ್ಲ. ಇದ್ರಿಂದ ವಾಹನ ಸವಾರರು, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುತ್ತಿದ್ದಾರೆಂದು ಪೀಠ ಹೇಳಿದೆ. ಹೊಸ ವಾಹನ ಖರೀದಿ ಮೊದಲು, ವಾಹನ ನಿಲುಗಡೆಗೆ ಜಾಗವಿದ್ಯಾ ಎಂಬುದನ್ನು ನೋಡಬೇಕೆಂದು ಕೋರ್ಟ್ ಹೇಳಿದೆ.