alex Certify ʼಪದ್ಮ ಪ್ರಶಸ್ತಿʼ ಕುರಿತಂತೆ ಪ್ರಧಾನಿ ಮೋದಿಯವರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪದ್ಮ ಪ್ರಶಸ್ತಿʼ ಕುರಿತಂತೆ ಪ್ರಧಾನಿ ಮೋದಿಯವರಿಂದ ಮಹತ್ವದ ಮಾಹಿತಿ

ಜನರಿಗೆ ಸ್ಪೂರ್ತಿದಾಯಕರಾದ ವ್ಯಕ್ತಿಗಳನ್ನು ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವಂತೆ ದೇಶದ ಜನರಲ್ಲಿ ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ. ಇದನ್ನು ಅವರು ಪೀಪಲ್ಸ್ ಪದ್ಮ (ಹ್ಯಾಷ್ ಟ್ಯಾಗ್ ನೊಂದಿಗೆ) ಎಂದು ಕರೆದಿದ್ದಾರೆ. ಪದ್ಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.

ಭಾರತವು ಅನೇಕ ಮಂದಿ ಪ್ರತಿಭಾವಂತ ವ್ಯಕ್ತಿಗಳನ್ನು ಹೊಂದಿದೆ. ಅಂತಹವರು ತಳಮಟ್ಟದಲ್ಲಿ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಅವುಗಳಲ್ಲಿ ಹೆಚ್ಚಿನದನ್ನು ನೋಡಿರುವುದಿಲ್ಲ ಅಥವಾ ಕೇಳಿರುವುದಿಲ್ಲ. ಅಂತಹ ಸ್ಪೂರ್ತಿದಾಯಕ ಜನರು ನಿಮಗೆ ತಿಳಿದಿದೆಯೇ ? ನೀವು ಅವರನ್ನು #ಪೀಪಲ್ಸ್ ಪದ್ಮಾಗೆ ನಾಮನಿರ್ದೇಶನ ಮಾಡಬಹುದು. ಸೆಪ್ಟೆಂಬರ್ 15ರ ವರೆಗೆ ನಾಮಪತ್ರಗಳು ತೆರೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂತಹ ಜನರನ್ನು ಗುರುತಿಸುವ ಸಲುವಾಗಿ ಕೇಂದ್ರ ಸರಕಾರ ಈ ಯೋಜನೆ ಕೈಗೊಂಡಿದೆ. ಹೀಗಾಗಿ ಎಲ್ಲ ಕೇಂದ್ರ ಸಚಿವಾಲಯಗಳು, ರಾಜ್ಯಗಳು ಮತ್ತು ಇತರೆ ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿಗೆ ಅರ್ಹರಾದ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸುವಂತೆ ಕೇಂದ್ರ ಗೃಹಸಚಿವಾಲಯ ತಿಳಿಸಿದೆ.

BIG BREAKING: ಏಕಾಏಕಿ ಪೊಲೀಸ್ ಠಾಣೆಗೆ ಬಂದಿದ್ದೇಕೆ ನಟ ದರ್ಶನ್…?

ಈ ವರ್ಷದ ಜನವರಿಯಲ್ಲಿ ನಡೆದ ತಮ್ಮ ಮೊದಲ ‘ಮನ್ ಕಿ ಬಾತ್’ ನಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಪ್ರಧಾನಿ ಮೋದಿ ಹೇಳಿದ್ದರು.

ಜನರು ತಮ್ಮ ನಾಮಪತ್ರಗಳನ್ನು ಪೋಸ್ಟ್ ಮಾಡುವ ಪದ್ಮ ಅವಾರ್ಡ್ಸ್ ವೆಬ್ ಸೈಟ್ ನ ಲಿಂಕ್ ನ್ನೂ ಕೂಡ ಪೋಸ್ಟ್ ಮಾಡಿದ್ದಾರೆ. ಪದ್ಮ ಪ್ರಶಸ್ತಿಗಳಿಗೆ ನಾಮಪತ್ರಗಳು ಅಥವಾ ಶಿಫಾರಸ್ಸುಗಳನ್ನು ಆನ್ ಲೈನ್ ನಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಸರಕಾರದ ಪ್ರಕಟಣೆ ತಿಳಿಸಿದೆ. ಕೇಂದ್ರವು ಸ್ವಯಂ ನಾಮನಿರ್ದೇಶನವನ್ನೂ ಸಹ ಮಾಡಿದೆ.

ಇನ್ನು ನಾಮನಿರ್ದೇಶನ ಮಾಡುವ ಜನರು ಶಿಫಾರಸು ಮಾಡಿದ ವ್ಯಕ್ತಿಯ ಸಾಧನೆಗಳು ಅಥವಾ ಸೇವೆಯನ್ನು ಉಲ್ಲೇಖಿಸಿ ಅರ್ಜಿಯಲ್ಲಿ ಬರೆಯಬೇಕು. 800 ಪದ ಮೀರದಂತೆ ಬರೆಯಬೇಕು ಎಂದು ಸರಕಾರ ಸೂಚಿಸಿದೆ.

ಈ ಕಾರಣಕ್ಕೆ ಡೆಲಿವರಿ ಬಾಯ್ ಆದ್ರು ಪೊಲೀಸ್ ಅಧಿಕಾರಿ…!

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಪದ್ಮ ಪ್ರಶಸ್ತಿ ಕೂಡ ಸೇರಿವೆ. ಪದ್ಮ ಪ್ರಶಸ್ತಿಗಳೆಂದರೆ- ಪದ್ಮವಿಭೂಷಣ್, ಪದ್ಮಭೂಷಣ್ ಮತ್ತು ಪದ್ಮಶ್ರೀ. ಈ ಪ್ರಶಸ್ತಿಗಳನ್ನು 1954ರಲ್ಲಿ ಸ್ಥಾಪಿಸಲಾಯಿತು. ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ನೀಡಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ವ್ಯಾಪಾರ ಮತ್ತು ಉದ್ಯಮ, ನಾಗರಿಕ ಸೇವೆಯಂತಹ ಎಲ್ಲಾ ಕ್ಷೇತ್ರಗಳಲ್ಲಿ ಅಥವಾ ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆ ಮಾಡಿದವರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...