ಬದನೆಕಾಯಿ, ಎಲ್ಲ ಋತುವಿನಲ್ಲೂ ಸಿಗುತ್ತದೆ. ಬದನೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಆಹಾರಕ್ಕೆ ವಿಶೇಷ ರುಚಿಯನ್ನು ನೀಡುತ್ತದೆ. ಅನೇಕರು ಬೇಸಿಗೆ ಹಾಗೂ ಚಳಿಗಾಲದಲ್ಲಿ ಹೆಚ್ಚು ಬದನೆಕಾಯಿ ಸೇವನೆ ಮಾಡಲು ಇಷ್ಟಪಡ್ತಾರೆ. ಬದನೆಯಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿಯಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದ ತೂಕವನ್ನು ನಿಯಂತ್ರಿಸುವ ಜೊತೆಗೆ ಹೃದಯ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತದೆ.
ಬದನೆಕಾಯಿ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಕೆಲ ನಿರ್ದಿಷ್ಟ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬದನೆಕಾಯಿ ಸೇವನೆ ಮಾಡಬಾರದು. ಯಾವುದೇ ರೀತಿಯ ಅಲರ್ಜಿಯಿದ್ದರೂ, ಬದನೆಕಾಯಿಯಿಂದ ದೂರವಿರುವುದು ಒಳ್ಳೆಯದು. ಬದನಕಾಯಿ, ಅಲರ್ಜಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಅದಕ್ಕೆ ಸಂಬಂದಿಸಿದ ಮಾತ್ರೆಗಳನ್ನು ಸೇವನೆ ಮಾಡ್ತಿದ್ದರೆ, ಅಂತವರು ಬದನೆಕಾಯಿಯಿಂದ ದೂರವಿರಬೇಕು. ಖಿನ್ನತೆಗೆ ಔಷಧಿ ತೆಗೆದುಕೊಳ್ಳುತ್ತಿರುವವರ ಮೇಲೆ ಬದನೆಕಾಯಿ, ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.
ಕಣ್ಣುಗಳು ಉರಿಯುತ್ತಿದ್ದರೆ, ಕಣ್ಣಿನ ಸಮಸ್ಯೆ ಕಾಡ್ತಿದ್ದರೆ ಅಂತವರು ಬದನೆಕಾಯಿ ಸೇವನೆ ಮಾಡಬಾರದು. ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು ಬದನೆಕಾಯಿಯಿಂದ ದೂರವಿರಬೇಕು. ದೇಹದಲ್ಲಿ ರಕ್ತದ ಕೊರತೆಯಿದ್ದರೆ, ಬದನೆಕಾಯಿ ಸೇವಿಸಬಾರದು. ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಯು ಇದನ್ನು ಸೇವಿಸಿದರೆ, ರಕ್ತ ಉತ್ಪತ್ತಿಗೆ ಸಮಸ್ಯೆಯಾಗುತ್ತದೆ.
ಗರ್ಭಿಣಿಯರು ಬದನೆಕಾಯಿಯನ್ನು ಸೇವಿಸಬಾರದು. ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸಿದರೆ, ಅದು ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿ ಉಂಟುಮಾಡಬಹುದು.