ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಒಮ್ಮೆ ಶುರುವಾದ್ರೆ ಗುಣಪಡಿಸಲು ಸಾಧ್ಯವಿಲ್ಲ. ಆದ್ರೆ ಜೀವನ ಶೈಲಿಯಲ್ಲಿ ಬದಲಾವಣೆ ತರುವ ಮೂಲಕ ರೋಗವನ್ನು ನಿಯಂತ್ರಿಸಬಹುದು. ಜೀವನಶೈಲಿ ಜೊತೆ ರಕ್ತದ ಗುಂಪು ಕೂಡ ಮಧುಮೇಹಕ್ಕೆ ಕಾರಣವಾಗುತ್ತದೆ.
ಅಧ್ಯಯನದ ಪ್ರಕಾರ, A ಅಥವಾ B ರಕ್ತದ ಗುಂಪು ಹೊಂದಿರುವವರಿಗೆ ಟೈಪ್ 2 ಮಧುಮೇಹದ ಅಪಾಯ ಹೆಚ್ಚು. ರಕ್ತದ ಗುಂಪು ಒ ಆಗಿದ್ದರೆ ಅಪಾಯ ಕಡಿಮೆ. ಈ ಅಧ್ಯಯನ 80 ಸಾವಿರ ಮಹಿಳೆಯರ ಮೇಲೆ ನಡೆದಿದೆ. ಅಧ್ಯಯನದಲ್ಲಿ ರಕ್ತದ ಗುಂಪು ಮತ್ತು ಟೈಪ್ 2 ಮಧುಮೇಹದ ನಡುವಿನ ಸಂಬಂಧವೇನು ಎಂದು ತಿಳಿಯಲು ಪ್ರಯತ್ನಿಸಲಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 3,553 ಮಹಿಳೆಯರಲ್ಲಿ ಟೈಪ್ 2 ಡಯಾಬಿಟಿಸ್ ಪತ್ತೆಯಾಗಿತ್ತು.
ಒ ರಕ್ತದ ಗುಂಪು ಹೊಂದಿರುವ ಮಹಿಳೆಯರಿಗಿಂತ ಎ ರಕ್ತದ ಗುಂಪು ಹೊಂದಿರುವ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ 10 ರಷ್ಟು ಹೆಚ್ಚಿತ್ತು. ಒ ರಕ್ತದ ಗುಂಪು ಹೊಂದಿರುವ ಮಹಿಳೆಯರಿಗಿಂತ ಬಿ ರಕ್ತದ ಗುಂಪು ಹೊಂದಿರುವ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ ಶೇಕಡಾ 21ರಷ್ಟಿತ್ತು. ಒ ನೆಗೆಟಿವ್ ರಕ್ತದ ಗುಂಪು ಹೊಂದಿರುವವರಲ್ಲಿ ಇದ್ರ ಅಪಾಯ ಅತ್ಯಂತ ಕಡಿಮೆ. ಬಿ ಪಾಸಿಟಿವ್ ಹೊಂದಿರುವವರಲ್ಲಿ ಇದ್ರ ಅಪಾಯ ಹೆಚ್ಚು.
ಒ ಹೊರತುಪಡಿಸಿ ಬೇರೆ ರಕ್ತದ ಗುಂಪು ಹೊಂದಿರುವವರಲ್ಲಿ ವಿಶೇಷ ರೀತಿಯ ಪ್ರೋಟೀನ್ ಇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.