alex Certify ಈ ರಕ್ತದ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಕಾಯಿಲೆಗಳ ಆತಂಕ…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಕ್ತದ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಕಾಯಿಲೆಗಳ ಆತಂಕ…….!

ನಾವು ಜೀವಂತವಾಗಿರಬೇಕೆಂದರೆ ನಮ್ಮ ಹೃದಯ  ಆರೋಗ್ಯವಾಗಿರಬೇಕು. ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಜೀವನಶೈಲಿಯಿಂದ ಬರುತ್ತವೆ. ಜೊತೆಗೆ ಇತರ ಕಾರಣಗಳೂ ಇರಬಹುದು. ಇದಲ್ಲದೇ ಕೆಲವು ನಿರ್ದಿಷ್ಟ ರಕ್ತದ ಗುಂಪು ಕೂಡ ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ.

ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಅನೇಕ ಅಂಶಗಳಲ್ಲಿ ರಕ್ತದ ಗುಂಪು ಕೂಡ ಸೇರಿದೆ. ಕೆಲವು ನಿರ್ದಿಷ್ಟ ರಕ್ತದ ಗುಂಪುಗಳನ್ನು ಹೊಂದಿರುವ ಜನರು ಇತರರಿಗಿಂತ ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳನ್ನು ಹೊಂದಿರುತ್ತಾರೆ. ಹಾಗಾಗಿ ತಪ್ಪದೇ ನಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

ರಕ್ತದ ಗುಂಪು ಮತ್ತು ಹೃದ್ರೋಗದ ನಡುವಿನ ಸಂಬಂಧ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಓ ರಕ್ತದ ಗುಂಪನ್ನು ಹೊಂದಿರುವವರಿಗಿಂತ ಎ ಮತ್ತು ಬಿ ಗುಂಪಿಗೆ ಸೇರಿದ ಜನರು ಹೆಚ್ಚಾಗಿ ಹೃದ್ರೋಗದಿಂದ ಬಳಲುತ್ತಾರೆ. ವಾಸ್ತವವಾಗಿ, A ಮತ್ತು B ಗುಂಪಿನ ಜನರು ತಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೊಂದಿರುತ್ತಾರೆ. ಹಾಗಾಗಿ ಈ ರಕ್ತದ ಗುಂಪಿಗೆ ಸೇರಿದವರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದಾಗ್ಯೂ ಎ ಮತ್ತು ಬಿ ಗುಂಪಿನ ಜನರ ಬಿಪಿ, ಓ ಗುಂಪಿನವರಿಗಿಂತ ಕಡಿಮೆ ಇರುತ್ತದೆ.

ತಜ್ಞರು ಹೇಳುವ ಪ್ರಕಾರ ಅತ್ಯಂತ ಅಪರೂಪದ ಗುಂಪು ಎಂದು ಕರೆಯಲ್ಪಡುವ ಓ ಗುಂಪಿನ ಜನರು ಕಡಿಮೆ ಹೃದಯ ಸಂಬಂಧಿ ಅಪಾಯಗಳನ್ನು ಹೊಂದಿರುತ್ತಾರೆ. ಈ ಅಧ್ಯಯನದಲ್ಲಿ, ಇತರ ಗುಂಪುಗಳಿಗೆ ಹೋಲಿಸಿದರೆ, O ರಕ್ತದ ಗುಂಪಿನ ಜನರಲ್ಲಿ ಹೃದಯಾಘಾತ ಮತ್ತು ಹೃದಯ ವೈಫಲ್ಯದ ಅಪಾಯವು ಶೇಕಡಾ 10 ರಷ್ಟು ಕಡಿಮೆಯಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...