ಕೆಲ ಮಹಿಳೆಯರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಆಯ್ಲಿ ಸ್ಕಿನ್ ನಿಂದಾಗಿ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಚರ್ಮ ಜಿಗುಟಾಗಿ ಮುಖ ಕೆಟ್ಟದಾಗಿ ಕಾಣುತ್ತದೆ. ಹಾರ್ಮೋನ್ ಬದಲಾವಣೆ ಹಾಗೂ ಬಿಸಿಲಿನಿಂದಾಗಿ ಚರ್ಮ ಆಯ್ಲಿಯಾಗುತ್ತದೆ. ಆಯ್ಲಿ ಸ್ಕಿನ್ ಮಹಿಳೆಯರು ಮಾಡುವ ಕೆಲವೊಂದು ತಪ್ಪಿನಿಂದಾಗಿ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
ಚರ್ಮ ಆಯ್ಲಿಯಾಗಿದೆ ಎನ್ನುವ ಕಾರಣಕ್ಕೆ ಕೆಲ ಮಹಿಳೆಯರು ಪದೇ ಪದೇ ಮುಖ ತೊಳೆಯುತ್ತಾರೆ. ಇದ್ರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆ ಪ್ರಮಾಣ ಕಡಿಮೆಯಾಗಿ ಚರ್ಮ ಒಣಗಲು ಶುರುವಾಗುತ್ತದೆ.
ಆಯ್ಲಿ ಸ್ಕಿನ್ ಹೊಂದಿದವರು ಮಾಯಿಶ್ಚರೈಸರ್ ಕ್ರೀಂ ಬಳಸಬಾರದು. ಇದು ಚರ್ಮ ಮತ್ತಷ್ಟು ಆಯ್ಲಿಯಾಗಲು ಕಾರಣವಾಗುತ್ತದೆ.
ಚರ್ಮ ತೇವಾಂಶ ಕಳೆದುಕೊಂಡ ಸಂದರ್ಭದಲ್ಲಿಯೂ ಚರ್ಮದಿಂದ ಎಣ್ಣೆ ಹೊರಬರುತ್ತದೆ. ಚರ್ಮವನ್ನು ತೇವಾಂಶಯುಕ್ತವಾಗಿಡುವ ಕ್ರೀಂ ಅವಶ್ಯವಾಗಿ ಹಚ್ಚಿ.
ಎಣ್ಣೆಯುಕ್ತ ಚರ್ಮ ಹೊಂದಿದವರು ಅದಕ್ಕೆ ಸೂಕ್ತವೆನಿಸುವ ಫೇಸ್ ವಾಶ್ ಬಳಸಬೇಕು. ಕೆಲ ಫೇಸ್ ವಾಶ್ ನಲ್ಲಿ ಗ್ಲೈಕೊಲಿಕ್ ಆಮ್ಲ ಅಥವಾ ಸ್ಯಾಲಿಸಿಲಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದು, ಅದು ಸ್ಕಿನ್ ಹಾಳು ಮಾಡುತ್ತದೆ.