alex Certify ಕೊರೊನಾ ಚೇತರಿಕೆ ನಂತ್ರ ಲಸಿಕೆ ಹಾಕಿಸಿಕೊಂಡವರಿಗೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಚೇತರಿಕೆ ನಂತ್ರ ಲಸಿಕೆ ಹಾಕಿಸಿಕೊಂಡವರಿಗೆ ಖುಷಿ ಸುದ್ದಿ

कोविड होने के 1 साल बाद तक बनी रहती है इम्यूनिटी, वैक्सीन लगवाने से हो जाता है कमाल

ಭಾರತದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರ್ತಿದೆ. ಹೊಸ ಪ್ರಕರಣಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಆದರೆ ದೇಶದ ಆರೋಗ್ಯ ತಜ್ಞರು ಕೊರೊನಾದ ಮೂರನೇ ಅಲೆ ತಡೆಯಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ದೇಶದಲ್ಲಿ ಅತಿದೊಡ್ಡ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ.

ಕೊರೊನಾ ಲಸಿಕೆ ಪಡೆಯುವುದರಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿರಕ್ಷೆ ಹೆಚ್ಚಾಗುತ್ತದೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಕೊರೊನಾ ಸೋಂಕಿಗೆ ಒಳಗಾದ ಜನರಲ್ಲಿ, ಕೋವಿಡ್ ಲಸಿಕೆ ಇಲ್ಲದೆ ಒಂದು ವರ್ಷದವರೆಗೆ ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಹೊಂದಿರುತ್ತಾರೆ. ರೋಗ ನಿರೋಧಕ ಶಕ್ತಿ ಬಲವಾಗಿರುವ ಕಾರಣ ವೈರಸ್ ವಿರುದ್ಧ  ಹೋರಾಡಬಹುದಾಗಿದೆ.

ಸಂಶೋಧಕರ ತಂಡ 63 ಜನರ ಮೇಲೆ ಅಧ್ಯಯನ ಮಾಡಿದೆ. ಸುಮಾರು 1-3 ತಿಂಗಳು, 6 ತಿಂಗಳು ಮತ್ತು 12 ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರ ಅಧ್ಯಯನ ನಡೆದಿದೆ. ಇದರಲ್ಲಿ ಶೇಕಡಾ 41 ರಷ್ಟು ಅಂದರೆ 26 ಜನರು ಒಂದೇ ಡೋಸ್ ಫಿಜರ್-ಬಯೋಟೆಕ್ ಅಥವಾ ಮಾಡರ್ನಾ ಲಸಿಕೆ ಪಡೆದಿದ್ದಾರೆ.

ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯ ಮತ್ತು ವೈನ್ ಕಾರ್ನೆಲ್ ಮೆಡಿಸಿನ್‌ ತಂಡದ ನೇತೃತ್ವದ ಸಂಶೋಧನೆಯ ಪ್ರಕಾರ, ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಳ್ಳುವ ಜನರ ದೇಹದಲ್ಲಿ ಪ್ರತಿಕಾಯಗಳು ಮತ್ತು ರೋಗನಿರೋಧಕ ಶಕ್ತಿ ಸುಮಾರು 6 ತಿಂಗಳಿಂದ 1 ವರ್ಷದವರೆಗೆ ಇರುತ್ತದೆ.

ಅಧ್ಯಯನದ ಪ್ರಕಾರ,  ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡು ಕೊರೊನಾ ಲಸಿಕೆ ಪಡೆದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಕೊರೊನಾದ ಅತ್ಯಂತ ತೀವ್ರವಾದ ರೂಪಾಂತರವನ್ನು ಅವರು ಎದುರಿಸಬಲ್ಲವರಾಗಿರುತ್ತಾರೆಂದು ಅಧ್ಯಯನ ಹೇಳಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...