alex Certify Big News: ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 28 ದಿನಗಳ ಬಳಿಕ ಸಿಗಲಿದೆ ಕೋವಿಶೀಲ್ಡ್ 2ನೇ ಡೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 28 ದಿನಗಳ ಬಳಿಕ ಸಿಗಲಿದೆ ಕೋವಿಶೀಲ್ಡ್ 2ನೇ ಡೋಸ್

ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. ಸರ್ಕಾರ ಲಸಿಕೆಗೆ ಸಂಬಂಧಿಸಿದ ನಿಯಮಗಳನ್ನು ಮತ್ತೊಮ್ಮೆ ಬದಲಾಯಿಸಿದೆ. ಈಗ ಕೋವಿಶೀಲ್ಡ್ ಮೊದಲ ಮತ್ತು ಎರಡನೆ ಲಸಿಕೆ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಿದೆ.

ಕೋವಿಶೀಲ್ಡ್ ಮೊದಲ ಮತ್ತು ಎರಡನೆಯ ಡೋಸ್ ನಡುವಿನ ಅಂತರವನ್ನು ವಿದೇಶಕ್ಕೆ ಹೋಗುವ ಪ್ರಯಾಣಿಕರಿಗೆ ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಆದ್ರೆ ಸಾಮಾನ್ಯ ಜನರಿಗೆ ಎರಡನೇ ಡೋಸ್ ಅವಧಿಯನ್ನು 84 ದಿನಗಳವರೆಗೆ ವಿಸ್ತರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ವಿದೇಶದಲ್ಲಿ ಅಧ್ಯಯನ ಮಾಡುವ ಮತ್ತು ಕೆಲಸ ಮಾಡುವ ಜನರು 28 ದಿನಗಳ ನಂತರ ಕೋವಿಶೀಲ್ಡ್ ನ ಎರಡನೇ ಪ್ರಮಾಣವನ್ನು ತೆಗೆದುಕೊಳ್ಳಬಹುದು. ಟೋಕಿಯೊದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ದಳದ ಕ್ರೀಡಾಪಟುಗಳು, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೋವಿಶೀಲ್ಡ್ ಎರಡನೇ ಡೋಸನ್ನು 28 ದಿನಗಳ ನಂತರ ಪಡೆಯಬಹುದು. ಕೊರೊನಾ ಲಸಿಕೆ ಎರಡು ಡೋಸ್ ಮಧ್ಯೆ ಇರುವ ಅಂತರವನ್ನು ಸರ್ಕಾರ ಮೂರು ಬಾರಿ ಬದಲಾಯಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...