ಒಪ್ಪತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ ಎಂಬ ಮಾತು ನಮ್ಮಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ.
ಹಸಿವನ್ನು ನೀಗಿಸಲು ಸ್ನಾಕ್ಸ್ ತಿನ್ನೋ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಬೆಳೆದುಬಿಟ್ಟಿದೆ. ಊಟಕ್ಕಿನ್ನೂ ತುಸು ಹೊತ್ತಿದೆ ಅಂತಾದ್ರೆ ತುರ್ತು ಹಸಿವನ್ನು ತಗ್ಗಿಸಲು ಏನಾದರೂ ಜಗಿಯುತ್ತಿರುತ್ತೇವೆ. ಆದರೆ ಹೀಗೆ ಊಟದ ಮಧ್ಯೆ ತಿನ್ನುವ ಅಭ್ಯಾಸ ಆಯಸ್ಸಿಗೇ ಕಂಟಕ ತರುತ್ತದೆ.
ಎಷ್ಟೇ ಕಡಿಮೆ ತಿಂದ್ರೂ, ಆಗಾಗ್ಗೆ ತಿನ್ನುವ ಅಭ್ಯಾಸ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಎರಡೂ ಆಹಾರದ ಮಧ್ಯೆ ಅಂತರ ಹೆಚ್ಚು ಇಡುವುದರಿಂದ ದೀರ್ಘಾಯುಷಿಯಗಳಾಗಬಹುದು ಹಾಗೂ ಆರೋಗ್ಯಯುತ ಜೀವನ ನಡೆಸಬಹುದು.
ದಿನಕ್ಕೆ ಒಂದೇ ಬಾರಿ ಆಹಾರ ಸೇವಿಸುವವರು ದೀರ್ಘಾಯುಷಿಗಳಾಗಿರುತ್ತಾರೆ. ಆಹಾರದ ನಡುವೆ ಅಂತರ ಜಾಸ್ತಿ ಇಟ್ಟುಕೊಂಡವರಿಗೆ ಮುಪ್ಪು ಸಂಬಂಧಿ ಕಾಯಿಲೆಗಳು ನಿಧಾನಗೊಳ್ಳುತ್ತವೆ .