ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಬೆಳ್ಳುಳ್ಳಿ ಇಲ್ಲ ಅಂದರೆ ಆಗೋದೇ ಇಲ್ಲ. ಅಲ್ಲದೇ ಈ ಬೆಳ್ಳುಳ್ಳಿಯಿಂದ ದೇಹದ ಆರೋಗ್ಯಕ್ಕೆ ಸಾಕಷ್ಟು ಲಾಭವೂ ಇದೆ. ಆದರೆ ಈ ಬೆಳ್ಳುಳ್ಳಿ ಎಲ್ಲಾ ಕಾಯಿಲೆಗೂ ರಾಮಬಾಣವಲ್ಲ. ಯಾವ ಕಾಯಿಲೆಯವರು ಬೆಳ್ಳುಳ್ಳಿಯನ್ನ ಸೇವಿಸಬಾರದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
1. ರಕ್ತದೊತ್ತಡ ಸಮಸ್ಯೆ: ನಿಮಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದಲ್ಲಿ ನಿಮಗೆ ಬೆಳ್ಳುಳ್ಳಿಯಂತಹ ಒಳ್ಳೆಯ ಔಷಧಿ ಮತ್ತೊಂದಿಲ್ಲ. ಅದೇ ನೀವು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರಾಗಿದ್ದರೆ ಬೆಳ್ಳುಳ್ಳಿ ಸೇವನೆ ನಿಮ್ಮ ಸಮಸ್ಯೆಯನ್ನ ಇನ್ನಷ್ಟು ಜಾಸ್ತಿ ಮಾಡಬಲ್ಲುದು. ಹೀಗಾಗಿ ನೀವೇನಾದರೂ ಕಡಿಮೆ ರಕ್ತದೊತ್ತಡ ಸಮಸ್ಯೆಯವರಾಗಿದ್ದರೆ ಬೆಳ್ಳುಳ್ಳಿ ಸೇವನೆ ಮಾಡೋದನ್ನ ಆದಷ್ಟು ಕಡಿಮೆ ಮಾಡಿದ್ರೇನೆ ಒಳ್ಳೆಯದು.
2. ಚರ್ಮದ ಸಮಸ್ಯೆ: ಬೆಳ್ಳುಳ್ಳಿಯಲ್ಲಿ ಅಲನೈನ್ ಎಂಬ ಅಂಶ ಇದ್ದು ಇದು ಕೆಲವರಲ್ಲಿ ತುರಿಕೆ ಸಮಸ್ಯೆಗೆ ಕಾರಣವಾಗಬಹುದು. ನಿಮಗೂ ಕೂಡ ಇಂತಹ ಅಲರ್ಜಿ ಸಮಸ್ಯೆ ಇದ್ದರೆ ಬೆಳ್ಳುಳ್ಳಿ ಸೇವನೆ ಮಾಡೋದನ್ನ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.