ಚೀನಾ ಎಂದರೇನೆ ಹೊಸ ತಂತ್ರಜ್ಞಾನಗಳನ್ನು ಬಹಳ ಅಗ್ಗದ ದರಕ್ಕೆ ಜನರ ನಡುವೆ ತರುವ ಜನರಿರುವ ದೇಶ. ವಿಶ್ವದ ಬಹುತೇಕ ದೊಡ್ಡ ಕಂಪನಿಗಳು ತಮ್ಮ ಉತ್ಪಾದನೆಗೆ ನೆಚ್ಚಿಕೊಂಡಿರುವುದು ಚೀನಾವನ್ನೇ. ಅಲ್ಲಿಂದ ತಯಾರಾಗಿ ಬರುವ ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಪ್ಯಾಕಿಂಗ್ ಮಾಡಿಸಿ ಹಂಚುತ್ತಾರೆ ಅಷ್ಟೇ.
ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……?
ಇಂಥ ಉತ್ಪಾದನಾ ದೈತ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ’ಡ್ರೋನ್ ಗಳ ಮಳೆ’ ಸುರಿದಿದೆಯಂತೆ ! ನಿಜ, ವಾಂಡಾ ಪ್ಲಾಜಾ ಶಾಪಿಂಗ್ ಮಾಲ್‌ನಿಂದ 200ಕ್ಕೂ ಅಧಿಕ ಡ್ರೋನ್‌ಗಳು ಆಕಾಶಕ್ಕೆ ಹಾರಿದ್ದವು. ’ಬೆಳಕಿನ ವಿಶಿಷ್ಟ ಪ್ರದರ್ಶನ’ ಆಯೋಜನೆಗೊಂಡಿತ್ತು. ಝೆಂಗ್‌ಝೌ ಹೈಟೆಕ್ ವಲಯದಲ್ಲಿ ನಡೆಯುವ ಈ ಲೈಟ್ ಶೋಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.
ಮನೆ ನಿರ್ಮಾಣ ಮಾಡುತ್ತಿದ್ದೀರಾ….? ಅಡುಗೆ ಕೋಣೆಯ ವಾಸ್ತು ಬಗ್ಗೆ ಇರಲಿ ಗಮನ
ಆದರೆ, ಏಕಾಏಕಿ ಡ್ರೋನ್‌ಗಳು ಆಕಾಶದಿಂದ ವೇಗವಾಗಿ ನೆಲಕ್ಕೆ ಅಪ್ಪಳಿಸಲು ಶುರುಮಾಡಿದವು. ಲೈಟ್ ಶೋ ನೋಡಲು ಬಂದಿದ್ದ ಜನರು ಕಂಗಾಲಾದರು. ಸುರಕ್ಷಿತ ಸ್ಥಳಗಳತ್ತ ಓಡಿದರು. ಎಲ್ಲ ಡ್ರೋನ್‌ಗಳು ತಲೆಯ ಮೇಲೆ ಬಿದ್ದು, ತಲೆ ಒಡೆದುಹೋಗುತ್ತದೆಯೋ ಎಂದು ಕಿರುಚಾಡಿದರು. ಅಲ್ಲಿ ಅಕ್ಷರಶಃ ’ಡ್ರೋನ್ʼಗಳ ಮಳೆ ಸುರಿದಿತ್ತು.
ಕೆಲವೇ ಕ್ಷಣಗಳಲ್ಲಿ ಡ್ರೋನ್‌ಗಳು ಮುರಿದುಕೊಂಡು ರಸ್ತೆಗಳ ಮೇಲೆ ರಾಶಿಯಾಗಿ ಬಿದ್ದಿದ್ದವು. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಎಲ್ಲ ಡ್ರೋನ್‌ಗಳು ಒಂದೇ ಬಾರಿಗೆ ನಿಷ್ಕ್ರಿಯಗೊಳ್ಳುವ ಹಿಂದೆ ಮಾಲ್ ಪ್ರತಿಸ್ಪರ್ಧಿಗಳ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
BREAKING: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಮೂವರು ನಾಗರಿಕರ ಹತ್ಯೆ
2018 ರಲ್ಲಿ ಕೂಡ ಇದೇ ಮಾದರಿ ನೂರಾರು ಡ್ರೋನ್‌ಗಳು ಸಾವಿರಾರು ಜನರ ಮೇಲೆ ಬಿದ್ದು ಅಪ್ಪಳಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿ ಬಹಳ ಆತಂಕಕ್ಕೆ ಕಾರಣವಾಗಿತ್ತು.