alex Certify ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ ಈ ರಾಶಿಚಕ್ರ ಚಿಹ್ನೆಯ ಜನರು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ ಈ ರಾಶಿಚಕ್ರ ಚಿಹ್ನೆಯ ಜನರು !

ರಾಶಿಚಕ್ರ ಚಿಹ್ನೆಗಳಿಗೆ ಅನುಗಣವಾಗಿ ಸ್ವಭಾವದಲ್ಲೂ ಅನೇಕ ರೀತಿಯ ಬದಲಾವಣೆಗಳಿರುತ್ತವೆ. ಕೆಲವು ನಿರ್ದಿಷ್ಟ ರಾಶಿಗಳನ್ನು ಹೊಂದಿರುವವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣವಿರುತ್ತದೆ. 5 ರಾಶಿಚಕ್ರದವರಲ್ಲಿ ಈ ಗುಣಗಳಿವೆ.

ಮೇಷ ರಾಶಿ – ಮೇಷ ರಾಶಿಯ ಜನರು ಜನ್ಮತಃ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಇತರರಿಗಿಂತ ಭಿನ್ನವಾಗಿ ಕಾಣುವ ಅಂಶಗಳು ಇವರಲ್ಲಿರುತ್ತವೆ. ಮೇಷ ರಾಶಿಯ ಜನರು ಅತ್ಯುತ್ತಮ ನಿರ್ವಾಹಕರು. ತಮ್ಮ ಅಹಂಕಾರವನ್ನು ಬದಿಗಿಟ್ಟು ಗಮ್ಯಸ್ಥಾನವನ್ನು ತಲುಪುತ್ತಾರೆ.

ಸಿಂಹ ರಾಶಿ– ಸಿಂಹ ರಾಶಿಯವರ ಅಧಿಪತಿ ಸೂರ್ಯ ಗ್ರಹ. ಇವರಲ್ಲಿ ಕೂಡ ನಾಯಕತ್ವದ ಗುಣವಿರುತ್ತದೆ. ಸೂರ್ಯನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದೆ. ಹಾಗಾಗಿ ಸಿಂಹ ರಾಶಿಯವರು ಕೂಡ ರಾಜಕುಮಾರರಂತೆ ಜೀವನವನ್ನು ನಡೆಸುತ್ತಾರೆ. ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿರುತ್ತದೆ. ತಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಮಾಡುತ್ತಾರೆ.

ಕನ್ಯಾ ರಾಶಿ – ಕನ್ಯಾ ರಾಶಿಯ ಜನರು ಉತ್ತಮ ಆಡಳಿತಗಾರರು ಮತ್ತು ನಾಯಕರಾಗುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಜೀವನದಲ್ಲಿ ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ತಂಡವನ್ನು ಚೆನ್ನಾಗಿ ಮುನ್ನಡೆಸುವ ಛಾತಿ ಹೊಂದಿರುತ್ತಾರೆ.

ಮಕರ ರಾಶಿ- ಮಕರ ರಾಶಿಯವರು ತಮ್ಮ ಕೆಲಸವನ್ನು ವಿಭಿನ್ನವಾಗಿ ಮಾಡಲು ಹೆಸರುವಾಸಿಯಾಗಿದ್ದಾರೆ. ಮಕರ ರಾಶಿಯವರಿಗೆ ಅಧಿಪತಿ ಶನಿ ಗ್ರಹ. ಇವರು ತಮ್ಮ ಸ್ವಂತ ವ್ಯವಹಾರವನ್ನು ಮಾತ್ರ ಪರಿಗಣಿಸುತ್ತಾರೆ. ಮಕರ ರಾಶಿಯವರು ಯಾವ ಕೆಲಸಕ್ಕೂ  ಹೆದರುವುದಿಲ್ಲ. ಅದನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ.

ಕುಂಭ ರಾಶಿ –  ಕುಂಭ ರಾಶಿಯ ಜನರು ಇತರರಿಗೆ ಉದಾಹರಣೆಯಾಗುತ್ತಾರೆ. ಅವರ ಕಾರ್ಯ ವಿಧಾನ ಎಲ್ಲರಿಗಿಂತ ಭಿನ್ನವಾಗಿರುತ್ತದೆ. ಕುಂಭ ರಾಶಿಯವರಿಗೆ ಅಧಿಪತಿ ಶನಿ ಗ್ರಹ. ಕುಂಭ ರಾಶಿಯವರು ಪ್ರತಿಯೊಂದು ಕೆಲಸವನ್ನು ನಿಯಮಗಳಿಗೆ ಅನುಸಾರವಾಗಿ ಮತ್ತು ಶಿಸ್ತಿನಿಂದ ಮಾಡಲು ಇಷ್ಟಪಡುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...