ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ವೇಗ ಕಡಿಮೆಯಾಗಿದೆ. ಆದ್ರೆ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಹೊಸ ಪ್ರಕರಣ ಹೆಚ್ಚಾಗ್ತಿದ್ದಂತೆ ಇದ್ರ ಬಗ್ಗೆ ತಿಳಿಯಲು, ಕೇಂದ್ರ ಸರ್ಕಾರ ಕೇರಳಕ್ಕೆ ತಜ್ಞರ ತಂಡ ಕಳುಹಿಸಿದೆ. ತಜ್ಞರ ತಂಡ, ಕೇರಳದಲ್ಲಿ ಕೊರೊನಾ ವಿಸ್ಫೋಟಕ್ಕೆ ಕಾರಣವೇನು ಎಂಬುದನ್ನು ಹೇಳಿದೆ.
ಕೇಂದ್ರ ಸರ್ಕಾರದ ತಜ್ಞರ ತಂಡದ ಪ್ರಕಾರ, ಮನೆಯಲ್ಲಿ ಐಸೋಲೇಷನ್ ಆಗಿರುವ ಕೊರೊನಾ ರೋಗಿಗಳ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ, ಹೊಸ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗಲು ಕಾರಣವಾಗಿದೆ.
ವರದಿಯ ಪ್ರಕಾರ, ಜುಲೈ 29 ರಂದು, ಕೇಂದ್ರ ಸರ್ಕಾರ ಆರು ಸದಸ್ಯರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಇದು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರಾದ ಡಾ.ಸುಜಿತ್ ಸಿಂಗ್ ಅವರ ನೇತೃತ್ವದ ತಂಡ, ಶೀಘ್ರವೇ ಸಂಪೂರ್ಣ ವರದಿ ನೀಡಲಿದೆ.
ಕೊರೊನಾ ನಿಯಮ ಮುರಿದ್ರೆ ಬೀಳಲಿದೆ 1 ಕೋಟಿ ರೂಪಾಯಿ ದಂಡ…!
ಕೇಂದ್ರ ತಂಡದ ಪ್ರಕಾರ, ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳ ಮೇಲ್ವಿಚಾರಣೆ ಸರಿಯಾಗಿ ನಡೆಯುತ್ತಿಲ್ಲ. ಅವರು ಹೊರಗೆ ಸುತ್ತಾಡುತ್ತಿದ್ದು, ಇದು ಕೊರೊನಾ ವೇಗ ಹೆಚ್ಚಿಸಿದೆ ಎಂದಿದ್ದಾರೆ. ಈ ಬಗ್ಗೆ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸ್ವಲ್ಪ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ತಜ್ಞರು ಹೇಳಿದ್ದಾರೆ.
ಕೇರಳದಲ್ಲಿ ಸತತ ಆರು ದಿನಗಳಿಂದ 20 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿವೆ. ಭಾನುವಾರ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ.