ಕೊಪ್ಪಳ: ವ್ಯಕ್ತಿಗೆ ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ ಪ್ರಕರಣ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳದಲ್ಲಿ ನಡೆದಿದ್ದು, ಇದೀಗ ಪ್ರಕರಣ ಸಂಬಂಧ 55 ಜನರ ವಿರುದ್ಧ ದೂರು ದಾಖಲಾಗಿದೆ.
ಪ್ರಕಾಶ್ ಎಂಬಾತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ, ಇದೇ ಕಾರಣಕ್ಕೆ ಗ್ರಾಮಸ್ಥರು ಪ್ರಕಾಶ್ ಗೆ ಚಪ್ಪಲಿಯಲ್ಲಿ ಥಳಿಸಿ, ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಚಿನ್ನದ ರೇಟಿಗೆ ಮನೋಹರಿ ಗೋಲ್ಡ್ ಟೀ ಹರಾಜು
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಅಸಭ್ಯ ವರ್ತನೆ ಸಂಬಂಧ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. ಇನ್ನು ವ್ಯಕ್ತಿಗೆ ಚಪ್ಪಲಿ ಹಾಕಿ ಮೆರವಣಿಗೆ ಮಾಡಿದ್ದಕ್ಕೆ 55 ಜನರ ವಿರುದ್ಧ ದೂರು ದಾಖಲಾಗಿದೆ.