ಮದುವೆ ಸಮಾರಂಭಗಳಲ್ಲಿ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರಿಲ್ಲವೆಂದ್ರೆ ಆ ಸಂಭ್ರಮ ಇರುವುದಿಲ್ಲ. ಕೊರೊನಾಗಿಂತ ಮೊದಲು ಭಾರತ ಸೇರಿದಂತೆ ಎಲ್ಲ ದೇಶಗಳಲ್ಲೂ ಮದುವೆ ಸೇರಿದಂತೆ ಸಮಾರಂಭಗಳನ್ನು ಅದ್ಧೂರಿಯಾಗಿ ಮಾಡಲಾಗ್ತಾಯಿತ್ತು.
ಸಾವಿರಾರು ಮಂದಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾರತದಲ್ಲಿ ರಾಜಕಾರಣಿಗಳ ಸಮಾರಂಭದಲ್ಲಿ ಕಾರ್ಯಕರ್ತರಿಗೆ ಹಣ ನೀಡಿ, ಕರೆದುಕೊಂಡು ಬರಲಾಗುತ್ತದೆ ಎಂಬ ಮಾತು ಕೇಳಿ ಬರುತ್ತದೆ. ಆದ್ರೆ ದಕ್ಷಿಣ ಕೊರಿಯಾದಲ್ಲಿ ಮದುವೆ ಸಮಾರಂಭಗಳಿಗೆ ಸಂಬಂಧಿಕರನ್ನೇ ಬಾಡಿಗೆಗೆ ತರಲಾಗುತ್ತದೆ.
ಹೌದು, ಉತ್ತರ ಕೊರಿಯಾ ದ್ವೇಷಕ್ಕೆ ಹೆಸರುವಾಸಿ. ಅಲ್ಲಿನ ವಿಚಿತ್ರ ಪದ್ಧತಿಗಳೂ ಸುದ್ದಿ ಮಾಡುತ್ತಿರುತ್ತವೆ. ಮದುವೆ ಆಗಿರಲಿ ಅಥವಾ ಇನ್ಯಾವುದೇ ಸಮಾರಂಭವಿರಲಿ, ಸಂಬಂಧಿಕರು ಬಾಡಿಗೆಗೆ ಸಿಗುತ್ತಾರೆ. ಜನರು ಸಾಕಷ್ಟು ಬಾಡಿಗೆ ನೀಡಿ, ಸಂಬಂಧಿಕರನ್ನು ಆಹ್ವಾನಿಸುತ್ತಾರೆ. ಇದರ ಹಿಂದೆ ವಿಶೇಷ ಕಾರಣವಿದೆ.
ದಕ್ಷಿಣ ಕೊರಿಯಾದಲ್ಲಿ, ಒಬ್ಬ ವ್ಯಕ್ತಿಯು ಹೆಚ್ಚು ಸಂಬಂಧಿಕರನ್ನು ಹೊಂದಿದ್ದರೆ, ಅವನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಈ ಕಾರಣದಿಂದಾಗಿ, ಜನರು ತಮ್ಮ ಮನೆಯ ಕಾರ್ಯದಲ್ಲಿ ಹೆಚ್ಚು ಜನರನ್ನು ತೋರಿಸಲು ಬಾಡಿಗೆಗೆ ಜನರನ್ನು ಕರೆಸುತ್ತಾರೆ. ಬಾಡಿಗೆ ಬಂದ ಸಂಬಂಧಿಕರು, ನಿಜವಾದ ಸಂಬಂಧಿಕರಿಗಿಂತ ಚೆನ್ನಾಗಿ ನಾಟಕವಾಡ್ತಾರೆ.
ಸಂಬಂಧಿಕರನ್ನು ಬಾಡಿಗೆ ನೀಡುವ ಅನೇಕ ಏಜೆನ್ಸಿಗಳಿವೆ. ಈ ಏಜೆನ್ಸಿಗಳು ಅವಶ್ಯಕತೆಗೆ ಅನುಗುಣವಾಗಿ ಅತಿಥಿಯನ್ನು ನೀಡುತ್ತಾರೆ. ಅವರಿಗೆ ಮೊದಲೇ ತರಬೇತಿ ನೀಡಲಾಗುತ್ತದೆ. ಒಂದು ಗಂಟೆಗೆ ಸಂಬಂಧಿಕರನ್ನು ಬಾಡಿಗೆ ನೀಡಿದ್ರೆ 1500 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.