ಕೇವಲ ಒಂದು ತಿಂಗಳ ಅವಧಿಯಲ್ಲಿ ತಮ್ಮ ಗ್ರಾಮದ 6 ಮಂದಿ ಯುವಕರು ಅಪಘಾತಕ್ಕೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ದೇವರ ಮೊರೆ ಹೋಗಿರುವ ಘಟನೆ ನಡೆದಿದೆ.
ವಿಜಯಪುರ ನಗರದ ಹೊರವಲಯದಲ್ಲಿರುವ ಕಾಲೇಭಾಗ ಪ್ರದೇಶದ ಆರು ಮಂದಿ ಯುವಕರು ಅಪಘಾತಗಳಲ್ಲಿ ಮೃತಪಟ್ಟಿದ್ದರು. ಇದು ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿತ್ತು.
ಇದರಿಂದಾಗಿ ಆತಂಕಗೊಂಡ ಗ್ರಾಮಸ್ಥರು ಊರಿನ ಜಟ್ಟಿಲಿಂಗೇಶ್ವರ ಹಾಗೂ ಮರಗಮ್ಮ ದೇವರ ಮೊರೆ ಹೋಗಿದ್ದು, ಪೂಜಾರಿಗಳ ಸಲಹೆಯಂತೆ ಊರಿನ ಜನರ ಅಮೂಲ್ಯ ಜೀವನ ರಕ್ಷಣೆಯಾಗಬೇಕೆಂಬ ಕಾರಣಕ್ಕೆ ಉಪವಾಸ ವೃತ ಆಚರಣೆ ಮಾಡುತ್ತಿದ್ದು ಜೊತೆಗೆ ಕಾಲಿಗೆ ಚಪ್ಪಲಿಯನ್ನೂ ಸಹ ಹಾಕುತ್ತಿಲ್ಲ. ಅಲ್ಲದೆ ವಾಹನವನ್ನು ಬಳಸುತ್ತಿಲ್ಲವೆಂದು ತಿಳಿದು ಬಂದಿದೆ.