alex Certify ಕೊರೊನಾ ಎರಡನೇ ಡೋಸ್ ಪಡೆಯಲು ಮರೆತಿದ್ದೀರಾ….? ಚಿಂತೆ ಬೇಡ, ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎರಡನೇ ಡೋಸ್ ಪಡೆಯಲು ಮರೆತಿದ್ದೀರಾ….? ಚಿಂತೆ ಬೇಡ, ಹೀಗೆ ಮಾಡಿ

ಕೊರೊನಾ ವಿರುದ್ಧ ಲಸಿಕೆ ಅಭಿಯಾನ ದೇಶದಲ್ಲಿ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ಭಾರತ 100 ಕೋಟಿ ಡೋಸ್ ಕೋವಿಡ್ ಲಸಿಕೆ ಹಾಕಿದ ದೇಶವಾಗಲಿದೆ. ಮೊದಲ ಡೋಸ್ ತೆಗೆದುಕೊಂಡ ಹೆಚ್ಚಿನ ಜನರಿಗೆ ಎರಡನೇ ಡೋಸ್ ತೆಗೆದುಕೊಳ್ಳುವಂತೆ ನಿರಂತರವಾಗಿ ಮನವಿ ಮಾಡಲಾಗ್ತಿದೆ.

ದೇಶದಲ್ಲಿ ಅನೇಕ ಜನರು, ಎರಡನೇ ಡೋಸ್ ಪಡೆಯಲು ಮರೆತಿದ್ದಾರೆ. ಸಮಯಕ್ಕೆ ಸರಿಯಾಗಿ ಡೋಸ್ ತೆಗೆದುಕೊಳ್ಳುತ್ತಿಲ್ಲ. ಕೊರೊನಾದ ಶೇಕಡಾ 100ರಷ್ಟು ರಕ್ಷಣೆಗಾಗಿ ಎರಡನೇ ಡೋಸ್ ಪಡೆಯುವುದು ಬಹಳ ಮುಖ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜೋಧ್‌ಪುರದ, ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಪ್ಲಿಮೆಂಟೇಶನ್ ರಿಸರ್ಚ್ ಆನ್ ಕಮ್ಯುನಿಕೇಬಲ್ ಡಿಸೀಸಸ್ ವೈದ್ಯರು ಎರಡನೇ ಡೋಸ್ ತೆಗೆದುಕೊಳ್ಳುವ ಮಹತ್ವದ ಬಗ್ಗೆ ಹೇಳಿದ್ದಾರೆ. ಒಂದು ವೇಳೆ ನಿಗದಿತ ಸಮಯದಲ್ಲಿ ಕೊರೊನಾ ಎರಡನೇ ಡೋಸ್ ತೆಗೆದುಕೊಳ್ಳಲು ಮರೆತು ಹೋಗಿದ್ದರೆ ಅಥವಾ ತೆಗೆದುಕೊಳ್ಳಲು ಆಗದೆ ಹೋಗಿದ್ದರೆ, ವೈದ್ಯರ ಸಲಹೆ ಪಡೆಯಿರಿ ಎಂದವರು ಹೇಳಿದ್ದಾರೆ.

ಕೊರೊನಾದಿಂದ ರಕ್ಷಣೆ ಪಡೆಯಬೇಕೆಂದ್ರೆ ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಿಂದ ರೋಗದ ವಿರುದ್ಧ ಸಾಕಷ್ಟು ಪ್ರತಿಕಾಯ ತಯಾರಾಗುತ್ತದೆ. ನಿಗದಿತ ಸಮಯ ಕಳೆದ ನಂತರವೂ, ಎರಡನೇ ಡೋಸ್ ತೆಗೆದುಕೊಳ್ಳಲು ಆಯ್ಕೆಯಿದೆ. ವೈದ್ಯರನ್ನು ಭೇಟಿಯಾಗಿ ಮೊದಲು ಪ್ರತಿಕಾಯದ ಪರೀಕ್ಷೆ ಮಾಡಬೇಕು. ಪ್ರತಿಕಾಯ ಈಗಾಗಲೇ ಇದ್ದರೆ, ಎರಡನೇ ಡೋಸ್ ತೆಗೆದುಕೊಳ್ಳಬಹುದು. ಪ್ರತಿಕಾಯ ಕಡಿಮೆಯಾಗಿದ್ದರೆ, ಮತ್ತೆ ಮೊದಲ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

ಪ್ರತಿಕಾಯ ಮತ್ತು ಲಸಿಕೆ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಂಶೋಧನೆ ಅಥವಾ ಅಧ್ಯಯನ ನಡೆದಿಲ್ಲ. ಪ್ರತಿಕಾಯ ತಯಾರಾಗದೆ ಹೋದಲ್ಲಿ ಮತ್ತು ಲಸಿಕೆ ಹಾಕುವುದು ವಿಳಂಬವಾದರೆ, ಮತ್ತೆ ಲಸಿಕೆ ಪಡೆಯಬೇಕಾ ಎಂಬ ಬಗ್ಗೆ  ಯಾವುದೇ ಮಾರ್ಗಸೂಚಿ ಇಲ್ಲ. ಯಾವುದೇ ಹೆಜ್ಜೆ ಮುಂದಿಡುವ ಮೊದಲು ವೈದ್ಯರ ಸಲಹೆ ಬಹಳ ಮುಖ್ಯವಾಗುತ್ತದೆ.

ಕೋವಿಡ್ ಲಸಿಕೆಯ ಮೊದಲ ಡೋಸ್ ನಂತರ ಪ್ರತಿಕಾಯಗಳು ಭಾಗಶಃ ರೂಪುಗೊಳ್ಳುತ್ತವೆ ಎಂದು ಡಾ. ಶರ್ಮಾ ಹೇಳುತ್ತಾರೆ. ಆಂಟಿಬಾಡಿ ಟೈಟರ್ ಪರೀಕ್ಷೆಯು ಲಸಿಕೆ ತೆಗೆದುಕೊಂಡ ನಂತರ ದೇಹದಲ್ಲಿ ಎಷ್ಟು ಶೇಕಡಾವಾರು ಪ್ರತಿಕಾಯ  ತಯಾರಾಗಿದೆ ಎಂಬುದನ್ನು ತೋರಿಸುತ್ತದೆ. ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ನಂತರ ನಲವತ್ತು ಪ್ರತಿಶತ ಪ್ರತಿಕಾಯಗಳು ರೂಪುಗೊಂಡರೆ, ಉಳಿದ ಅರವತ್ತು ಪ್ರತಿಶತ ಪ್ರತಿಕಾಯಗಳಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಇದು ಸೋಂಕಿನಿಂದ ಶೇಕಡಾ 100ರಷ್ಟು ರಕ್ಷಣೆ ನೀಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...