alex Certify ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯುತ್ತಿಲ್ಲವಾ….? ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯುತ್ತಿಲ್ಲವಾ….? ಇದರ ಹಿಂದಿದೆ ಈ ಕಾರಣ

ಪ್ರತಿದಿನ ವ್ಯಾಯಾಮ ಮಾಡ್ತೀನಿ ಆದ್ರೂ ತೂಕ ಇಳಿಯುತ್ತಿಲ್ಲ ಅನ್ನೋದು ಹಲವರ ಅಳಲು. ಇದಕ್ಕೆ ಕಾರಣ ಏನು ಅನ್ನೋದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಸ್ಥೂಲ ಕಾಯ ಹೊಂದಿರುವವರಲ್ಲಿ ಕೊಬ್ಬಿನ ಅಂಗಾಂಶ ಗಾಢವಾಗಿರುತ್ತದೆ ಮತ್ತು ಊದಿಕೊಂಡಿರುತ್ತದೆ.

ಇದರಿಂದಾಗಿ ಎಷ್ಟು ಪ್ರಯತ್ನಿಸಿದ್ರೂ ಅವರ ತೂಕ ಇಳಿಯುವುದಿಲ್ಲ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಕೊಬ್ಬು ಅಧಿಕ ಗಾತ್ರ ಹೊಂದಿರುವುದರಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ತಂತಾನೇ ಅದು ವಿಸ್ತರಣೆಗೊಳ್ಳುವುದರಿಂದ ಉಸಿರುಗಟ್ಟುತ್ತದೆ.

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಮತ್ತು ಬೊಜ್ಜಿನ ಸಮಸ್ಯೆ ಇರುವವರನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಈ ತೀರ್ಮಾನಕ್ಕೆ ಬಂದಿದ್ದಾರೆ. ಕೊಬ್ಬಿನ ಅಂಗಾಂಶಗಳ ವಿಸ್ತರಣೆಯಿಂದಾಗಿ ಅವರಲ್ಲಿ ಆಮ್ಲಜನಕ ಪೂರೈಕೆಯ ಕೊರತೆ ಉಂಟಾಗುತ್ತದೆ ಎಂದಿದ್ದಾರೆ.

ಕೋಶಗಳು ದೊಡ್ಡದಾಗುತ್ತಿದ್ದಂತೆ ತೊಂದರೆಗೀಡಾಗುತ್ತವೆ. ಆಮ್ಲಜನಕಕ್ಕಾಗಿ ಹೋರಾಟ ಶುರು ಮಾಡುತ್ತವೆ. ಇದರಿಂದ ಕೊಬ್ಬಿನ ಅಂಗಾಂಶದಲ್ಲಿ ಉರಿಯೂತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪ್ರತಿನಿತ್ಯ ವ್ಯಾಯಾಮ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯ ಚೆನ್ನಾಗಿರುತ್ತದಲ್ಲದೇ ದಿನವಿಡಿ ಲವಲವಿಕೆಯಿಂದ ಇರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...