ಟ್ರಕ್, ಕ್ಯಾಬ್ ಮತ್ತು ಬಸ್ ಚಾಲಕರು ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ತಂದಿರುವ ಹೊಸ ದಂಡ ಮತ್ತು ಶಿಕ್ಷೆ ಪ್ರಮಾಣವನ್ನು ವಿರೋಧಿಸಿ ದೇಶಾದ್ಯಂತ ನಡೆಸಿದ ಪ್ರತಿಭಟನೆಯಿಂದಾಗಿ ಪೆಟ್ರೋಲ್ ಪಂಪ್ ಗಳಲ್ಲಿ ಜನದಟ್ಟಣೆ ಕಂಡುಬಂದಿತ್ತು.
ವಾಹನ ಚಾಲಕರು ಹಿಟ್ ಅಂಡ್ ರನ್ ರಸ್ತೆ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ದಂಡದ ಕಾನೂನಿನಲ್ಲಿ ನಿಬಂಧನೆಯನ್ನು ವಿರೋಧಿಸಿ ಸೋಮವಾರ ರಾಜ್ಯಾದ್ಯಂತ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಇದರಿಂದಾಗಿ ಕೆಲವೆಡೆ ಇಂಧನ ಕೊರತೆಯ ಭೀತಿಯನ್ನು ಪ್ರತಿಭಟನಾಕಾರರು ಹೇಳಿದ್ದರು. ಏತನ್ಮಧ್ಯೆ ಜನವರಿ 2 ರಂದು ಮುಷ್ಕರ ಮುಂದುವರೆದಿದ್ದು ಒಂದು ವೇಳೆ ಪ್ರತಿಭಟನೆ ಕೊನೆಯಾಗದಿದ್ದರೆ, ಇಂಧನ ಕೊರತೆ ಎದುರಾಗುತ್ತದೆಂದು ವಾಹನ ಸವಾರರು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ ಗಳ ಮುಂದೆ ಜಮಾಯಿಸಿದ್ದರು. ಮಹಾರಾಷ್ಟ್ರದಾದ್ಯಂತ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಇಂತಹ ದೃಶ್ಯ ಕಂಡುಬಂದಿದೆ.
ವಿವಿಧ ನಗರಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪೂರೈಕೆಯಲ್ಲಿ ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ, ಇದರ ಪರಿಣಾಮವಾಗಿ ವಾಹನಗಳ ಉದ್ದನೆಯ ಸರತಿ ಸಾಲುಗಳು, ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿನ ಪ್ರಸ್ತುತ ಸನ್ನಿವೇಶವನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
https://twitter.com/pulkitdotjava/status/1741760019555910097?ref_src=twsrc%5Etfw%7Ctwcamp%5Etweetembed%7Ctwterm%5E174176001955