ನಿಯಂತ್ರಣ ಮೀರಿ ಓಡುತ್ತಿರುವ ಹಣದುಬ್ಬರಕ್ಕೆ ಪರಿಣಾಮವನ್ನು ಬಡವರ ಮೇಲೆ ತಗ್ಗಿಸಲೆಂದು ಪಾಕಿಸ್ತಾನ ಸರ್ಕಾರ ಉಚಿತವಾಗಿ ಗೋಧಿ ಹಿಟ್ಟು ಹಂಚುವ ಯೋಜನೆಗೆ ಚಾಲನೆ ನೀಡಿದೆ. ಇದರ ಪರಿಣಾಮವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ.
ಪೇಶಾವರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾದ ವಿಡಿಯೋವೊಂದರಲ್ಲಿ ಜನರು ಗೋಧಿ ಹೊತ್ತೊಯ್ಯುತ್ತಿರುವ ವಾಹನವೊಂದರ ಹಿಂದೆ ಓಡಿ ಹೋಗುತ್ತಿರುವುದನ್ನು ನೋಡಬಹುದಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಉಚಿತ ವಿತರಣಾ ಕೇಂದ್ರಗಳಲ್ಲಿ ಉಂಟಾದ ನೂಕು ನುಗ್ಗಲಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದು, ಇದರಲ್ಲಿ ಮಹಿಳೆಯರೂ ಸೇರಿದ್ದಾರೆ.
ಮಂಗಳವಾರದಂದು ಇಬ್ಬರು ವಯಸ್ಕ ಮಹಿಳೆಯರು ಹಾಗೂ ಪುರುಷರೊಬ್ಬರು ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.