ನವದಹೆಲಿ : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೆ ಶಾಕ್, ದೇಶದಲ್ಲಿ ಸಕ್ಕರೆ ದರ ಶೇ. 3 ರಷ್ಟು ಏರಿಕೆಯಾಗಿದೆ.
ದೇಶಾದ್ಯಂತ ಮಳೆ ಕೊರತೆಯಿಂದ ಕಬ್ಬು ಬೆಳೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಸಕ್ಕರೆ ದರ ಶೇ.3 ರಷ್ಟು ಏರಿಕೆಯಾಗಿದೆ. ಕಳೆದ 6 ವರ್ಷಗಳಲ್ಲೇ ಇದು ಅತಿ ಹೆಚ್ಚು ಏರಿಕೆಯಾಗಿದೆ. ಸಕ್ಕರೆ ದರ ಹೆಚ್ಚಳದ ಹಿನ್ನೆಲೆಯಲ್ಲಿ ಇತರೆ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.
ಸದ್ಯ ಪ್ರತಿ ಮೆಟ್ರಿಕ್ ಟನ್ ಸಕ್ಕರೆ ದರವು 37,760 ರೂ. ಗಳಿಗೆ ಏರಿಕೆ ಕಂಡಿದೆ. ಬೇಡಿಕೆಯಷ್ಟು ಸಕ್ಕರೆ ಉತ್ಪಾದನೆಯಾಗದಿದ್ದರೆ ಸಕ್ಕರೆ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.