ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಆಕಾಶ ಮುಟ್ಟಿದೆ. ಕೆಲ ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಯಾಗಿದೆ. ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ವಾಹನ ಸವಾರರು ಇದಕ್ಕೆ ಪರಿಹಾರ ಹುಡುಕುತ್ತಿದ್ದಾರೆ. ಕೆಲವರು ಪೆಟ್ರೋಲ್ ವಾಹನ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಗೆ ಮುಂದಾಗಿದ್ದಾರೆ. ಮತ್ತೆ ಕೆಲವರು ಅಡ್ಡ ದಾರಿ ಹಿಡಿದು ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ ಮಾಡ್ತಿದ್ದಾರೆ.
ವಾಹನದಲ್ಲಿರುವ ಪೆಟ್ರೋಲ್ ಟ್ಯಾಂಕ್ ತೆಗೆದು ಎಲೆಕ್ಟ್ರಿಕ್ ಎಂಜಿನ್ ಹಾಕ್ತಿದ್ದಾರೆ. ಇದಕ್ಕೆ ಜನರು ಕೇವಲ 10 ಸಾವಿರ ರೂಪಾಯಿ ಖರ್ಚು ಮಾಡ್ತಿದ್ದಾರೆ. ಇದನ್ನು ಬದಲಿಸಿದ ನಂತ್ರ ಪೆಟ್ರೋಲ್ ಹಾಕುವ ಬದಲು ಚಾರ್ಜ್ ಮಾಡಬೇಕಾಗುತ್ತದೆ. ಬ್ಯಾಟರಿ ಹಾಕಿದ ನಂತ್ರ ಬೈಕ್ 60-70 ಕಿಲೋಮೀಟರ್ ವೇಗ ನೀಡುತ್ತದೆ.
ಒಮ್ಮೆ ಚಾರ್ಜ್ ಮಾಡಿದ್ರೆ 300 ಕಿಲೋಮೀಟರ್ ವಾಹನ ಚಲಾಯಿಸಬಹುದು ಎನ್ನಲಾಗಿದೆ. ಆದ್ರೆ ಹೀಗೆ ಮಾಡುವುದು ತಪ್ಪು. 1988 ಸೆಕ್ಷನ್ 52ರ ಪ್ರಕಾರ, ಯಾವುದೇ ವಾಹನದ ಎಂಜಿನ್ ಬದಲಿಸುವುದು ಅಪರಾಧ. ಕಂಪನಿ ಸಿದ್ಧಪಡಿಸಿದ ಯಾವುದೇ ವಾಹನದಲ್ಲಿ ಬದಲಾವಣೆ ಮಾಡಬಾರದು. ಹಾಗೆ ಮಾಡಿದ್ರೆ ದಂಡದ ಜೊತೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.