ಮನೆಯ ಮುಂದೆ ಅನೇಕರು ಹೂವಿನ ಗಿಡಗಳನ್ನು ಬೆಳೆಸಿರ್ತಾರೆ. ಆದ್ರೆ ಎಲ್ಲ ಹೂಗಳು ನಮಗೆ ಅದೃಷ್ಟ ತರುವುದಿಲ್ಲ. ಕೆಲ ಹೂಗಳಿಗೆ ನಮ್ಮ ಅದೃಷ್ಟ ಬದಲಿಸುವ ಶಕ್ತಿ ಇರುತ್ತದೆ. ಅದ್ರಲ್ಲಿ ಪಿಯೋನಿ (peony) ಹೂ ಕೂಡ ಒಂದು. ಇದನ್ನು ಪಿಯೋನಿ ಗುಲಾಬಿ ಎಂದು ಕರೆಯಲಾಗುತ್ತದೆ. ಇದು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಇದನ್ನು ಹೂಗಳ ರಾಣಿ ಎಂದು ಕರೆಯಲಾಗುತ್ತದೆ.
ಈ ಹೂವುಗಳನ್ನು ಪ್ರೀತಿ ಮತ್ತು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲೂ ಈ ಹೂವಿಗೆ ಮಹತ್ವ ನೀಡಲಾಗಿದೆ. ವಾಸ್ತು ಪ್ರಕಾರ, ಕುಟುಂಬದ ಕಲಹ ಕಡಿಮೆ ಮಾಡುವುದ್ರಿಂದ ಹಿಡಿದು ಮದುವೆ ಸೌಭಾಗ್ಯ ನೀಡುವವರೆಗೆ ಅನೇಕ ಪ್ರಯೋಜಗಳು ಈ ಹೂವಿನಿಂದ ಆಗುತ್ತದೆ.
ಮದುವೆ ತಡವಾಗ್ತಿದೆ ಎನ್ನುವವರು ಡ್ರಾಯಿಂಗ್ ರೂಮಿನಲ್ಲಿ ಪಿಯೋನಿ ಹೂವನ್ನು ಇಡಬೇಕು. ಇಲ್ಲವೆ ಈ ಹೂವಿನ ಫೋಟೋವನ್ನಾದ್ರೂ ಹಾಕಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಹೀಗೆ ಮಾಡಿದಲ್ಲಿ ಶೀಘ್ರ ಕಂಕಣ ಭಾಗ್ಯ ಕೂಡಿ ಬರುತ್ತದೆ.
ಮನೆಯ ನೈಋತ್ಯ ಭಾಗದಲ್ಲಿ ಪಿಯೋನಿ ಗಿಡವನ್ನು ನೆಡುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಆರ್ಥಿಕ ವೃದ್ಧಿಗೆ ದಾರಿ ತೆರೆಯುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಕೂಡ ನೀವು ಪಿಯೋನಿ ಗಿಡವನ್ನು ಬೆಳೆಸಬಹುದು. ಇದ್ರಿಂದ ಯಾವುದೇ ದುಷ್ಟ ಶಕ್ತಿ ನಿಮ್ಮ ಮನೆ ಪ್ರವೇಶ ಮಾಡುವುದಿಲ್ಲ. ಯಾವುದೇ ನಕಾರಾತ್ಮಕ ಪ್ರಭಾವ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಾಗುವುದಿಲ್ಲ.
ದಾಂಪತ್ಯದಲ್ಲಿ ಸುಖ ಬೇಕು, ಸದಾ ಪತಿ – ಪತ್ನಿ ಸಂತೋಷದಿಂದ ಇರಬೇಕು ಎಂದಾದ್ರೆ ನೀವು ಬೆಡ್ ರೂಮಿನಲ್ಲಿ ಈ ಹೂವಿನ ಗಿಡವನ್ನು ಬೆಳೆಸಬಹುದು. ಇಲ್ಲವೆ ಅದ್ರ ಫೋಟೋವನ್ನು ಹಾಕಬಹುದು. ಇದ್ರಿಂದ ದಾಂಪತ್ಯದಲ್ಲಿ ಆನಂದ ಸಿಗುತ್ತದೆ.