ವೃದ್ಧಾಪ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಿರುತ್ತದೆ. ಕೆಲವರು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಶುರು ಮಾಡಿರ್ತಾರೆ. ಮತ್ತೆ ಕೆಲವರು ಹೂಡಿಕೆ ಎಲ್ಲಿ ಮಾಡಬೇಕೆಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ. ನೀವೂ ಈ ಗೊಂದಲದಲ್ಲಿದ್ದರೆ ನಿಮಗೊಂದು ಅಮೂಲ್ಯ ಸಲಹೆಯಿದೆ. ವೃದ್ಧಾಪ್ಯವನ್ನು ಭದ್ರಪಡಿಸಿಕೊಳ್ಳಲು ನೀವು ಸುರಕ್ಷಿತವಾಗಿರುವ ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಬಹುದು.
ಹೊಸ ಪಿಂಚಣಿ ವ್ಯವಸ್ಥೆ ಅಂದರೆ ಎನ್ ಪಿ ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ನೀವು ನಿವೃತ್ತಿ ನಂತ್ರ ತಿಂಗಳಿಗೆ 50,000 ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದು. 30ನೇ ವಯಸ್ಸಿನಲ್ಲಿ ನೀವು ಹೂಡಿಕೆ ಶುರು ಮಾಡಿದ್ರೆ ನಿವೃತ್ತಿ ನಂತ್ರ ನಿಮಗೆ ಪ್ರತಿ ತಿಂಗಳು 50 ಸಾವಿರದವರೆಗೆ ಪಿಂಚಣಿ ಸಿಗುತ್ತದೆ. ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 60 ವರ್ಷದ ನಂತ್ರ ನಿಮ್ಮ ಉಳಿತಾಯ 1 ಕೋಟಿ ರೂಪಾಯಿಗಿಂತ ಹೆಚ್ಚಿರುತ್ತದೆ.
ಎನ್ ಪಿಎಸ್, ಸರ್ಕಾರದ ಭದ್ರತೆ ಹೊಂದಿದೆ. ವಾರ್ಷಿಕ ಶೇಕಡಾ 9 ರಿಂದ 12 ರಷ್ಟು ಬಡ್ಡಿ ಸಿಗುತ್ತದೆ. ಎನ್ಪಿಎಸ್ ನಲ್ಲಿ ಯಾವ ವರ್ಷದಿಂದ ಹೂಡಿಕೆ ಶುರು ಮಾಡಿ, ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಇದ್ರ ಮೇಲೆ ನಿಮಗೆ ತಿಂಗಳ ಪಿಂಚಣಿ ಸಿಗುತ್ತದೆ. 18 ವರ್ಷದಿಂದ 65 ವರ್ಷದವರೆಗಿನ ಯಾವುದೇ ವ್ಯಕ್ತಿ, ಎನ್ಪಿಎಸ್ ನಲ್ಲಿ ಹೂಡಿಕೆ ಮಾಡಬಹುದು.