ಬೆಂಗಳೂರು: ಹೆಚ್ಚಿನ ಪಿಂಚಣಿ ಪಾವತಿಸಿ ಬಳಿಕ ವೃದ್ಧೆ ಬ್ಯಾಂಕ್ ಅಕೌಂಟ್ ಸ್ಥಗಿತಗೊಳಿಸಲಾಗಿದ್ದು, ಬ್ಯಾಂಕ್ ಕ್ರಮಕ್ಕೆ ಹೈಕೋರ್ಟ್ ಏಕಸದಸ್ಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಹೆಚ್ಚುವರಿ ಪಿಂಚಣಿ ಬ್ಯಾಂಕ್ ಅಧಿಕಾರಿಗಳಿಂದ ವಸೂಲಿಗೆ ಆದೇಶಿಸಲಾಗಿದೆ. ಹಿರಿಯ ನಾಗರಿಕರಿಗೆ ಕಾಳಜಿ, ಸಹಾನುಭೂತಿ ಅವಶ್ಯಕತೆ ಎಂದು ಹೈಕೋರ್ಟ್ ಹೇಳಿದೆ. ಪಿಂಚಣಿದಾರರ ಧ್ವನಿಗೆ ಸರ್ಕಾರಿ ಸಂಸ್ಥೆಗಳ ಕಿವಿ ಕಿವುಡಾಗಬಾರದು. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಕಣ್ಣು ಕುರುಡಾಗಬಾರದು ಎಂದು ಹೇಳಿದ್ದು, 2016 ರಿಂದಲೂ ಸಮಸ್ಯೆ ಬಗೆಹರಿಸಲು ಬ್ಯಾಂಕ್ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಪಿಂಚಣಿದಾರ ಮಹಿಳೆಯಿಂದ ಹಣ ವಸೂಲಿ ಮಾಡದಂತೆ ಆದೇಶಿಸಲಾಗಿದೆ.
ಪಾವತಿಯಾಗಿದ್ದ ಹೆಚ್ಚುವರಿ ಪಿಂಚಣಿಯನ್ನು ಅಧಿಕಾರಿಗಳಿಂದ ವಸೂಲಿ ಮಾಡಿ ಎಂದು ತಿಳಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದಿಂದ ಆದೇಶ ನೀಡಲಾಗಿದೆ. 2016ರಲ್ಲಿ ವೃದ್ಧೆ ನಂದಿನಿದೇವಿ ಅವರ ಖಾತೆಯನ್ನು ಬ್ಯಾಂಕ್ ಸ್ಥಗಿತಗೊಳಿಸಿತ್ತು. ಹೆಚ್ಚುವರಿ ಪಿಂಚಣಿ ಹಿಂಪಡೆಯುವಂತೆ ಕೋರಿದರೂ ಸಿಬ್ಬಂದಿ ಸ್ಪಂದಿಸಿರಲಿಲ್ಲ. 2016 ರಲ್ಲಿ ಹೆಚ್ಚುವರಿ ಪಿಂಚಣಿ 50,000 ರೂ. ಪಾವತಿಸಲಾಗಿತ್ತು.