ಬೆಳಗಾವಿ: ನಿವೃತ್ತಿ ನಂತರ ನೌಕರರು, ಸಿಬ್ಬಂದಿಗೆ 15,000 ರೂ., 20,000 ರೂ. ಹಾಗೂ 25,000 ರೂ. ಪಿಂಚಣಿ ನೀಡಲು ತೀರ್ಮಾನಿಸಲಾಗಿದೆ.
ಶ್ರೀ ಬೀರೇಶ್ವರ ಕ್ರೆಡಿಟ್ ಕೋ-ಆಪ್ ಸೊಸೈಟಿ ಸಂಸ್ಥಾಪಕ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಬೀರೇಶ್ವರ ಕ್ರೆಡಿಟ್ ಸೊಸೈಟಿ ಸಿಬ್ಬಂದಿಗೆ ನಿವೃತ್ತಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ವಿನೂತನ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಬೀರೇಶ್ವರ ಸೊಸೈಟಿಯಲ್ಲಿ ಕಾಯಂ ಹೊಂದಿದ 1006 ಸಿಬ್ಬಂದಿಯನ್ನು ಪಿಂಚಣಿ ಯೋಜನೆಗೆ ಒಳಪಡಿಸಲಾಗಿದೆ.
ಗ್ರೇಡ್ ಎ ನಲ್ಲಿ ಪ್ರಧಾನ ವ್ಯವಸ್ಥಾಪಕರು, ಉಪಪ್ರಧಾನ ವ್ಯವಸ್ಧಾಪಕರು, ಸಹಾಯಕ ಪ್ರಧಾನ ವ್ಯವಸ್ಧಾಪಕರಿದ್ದು, ಅವರಿಗೆ 25,000 ರೂ. ಪಿಂಚಣಿ ಸಿಗಲಿದೆ.
ಗ್ರೇಡ್ ಬಿ ನಲ್ಲಿ ಹಿರಿಯ ವ್ಯವಸ್ಥಾಪಕರು, ಕಿರಿಯ ವ್ಯವಸ್ಥಾಪಕರು, ವ್ಯವಸ್ಥಾಪಕರು, ಹಿರಿಯ ಗುಮಾಸ್ತರು, ಕಿರಿಯ ಗುಮಾಸ್ತರು ಒಳಗೊಂಡಿದ್ದು, 20,000 ರೂ. ಪಿಂಚಣಿ ಸೌಲಭ್ಯ ನೀಡಲಾಗುತ್ತದೆ.
ಗ್ರೇಡ್ ಸಿ ನಲ್ಲಿ ಅಟೆಂಡರ್, ಭದ್ರತಾ ಸಿಬ್ಬಂದಿ, ಚಾಲಕರು ಸಿಬ್ಬಂದಿಗೆ 15,000 ರೂ. ಪಿಂಚಣಿ ಸೌಲಭ್ಯ ನೀಡಲಾಗುವುದು. ಸಹಕಾರ ಕ್ಷೇತ್ರದಲ್ಲಿ ಈ ರೀತಿಯ ಪಿಂಚಣಿ ಯೋಜನೆಯನ್ನು ಬೀರೇಶ್ವರ ಕ್ರೆಡಿಟ್ ಸೊಸೈಟಿಯಲ್ಲಿ ಮೊದಲ ಬಾರಿಗೆ ಬಾರಿಗೆ ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ.