ಬೆಂಗಳೂರು: ಮಾಜಿ ದೇವದಾಸಿಯರ ಮಾಸಾಶನ ಪಾವತಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ.
12,14,59,500 ರೂಪಾಯಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಏಪ್ರಿಲ್. ಮೇ. ಜೂನ್ ತಿಂಗಳ ಮಾಶಾಸನ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ.
ಕಳೆದ ಐದು ತಿಂಗಳಿನಿಂದ ದೇವದಾಸಿಯರಿಗೆ ಸರ್ಕಾರದಿಂದ ಪಿಂಚಣಿ ಬಿಡುಗಡೆಯಾಗಿಲ್ಲವೆಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮುಖ್ಯ ಕಾರ್ಯದರ್ಶಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೂಡಲೇ ಪಿಂಚಣಿ ಬಿಡುಗಡೆ ಮಾಡುವಂತೆ ಸೂಚಿಸಿದ್ದರು.
ರಾಜ್ಯದಲ್ಲಿ ಸುಮಾರು 30,000 ದೇವದಾಸಿಯರಿದ್ದಾರೆ ಎನ್ನಲಾಗಿದ್ದು, ಮಾಸಿಕ 1,500 ರೂ. ಪಿಂಚಣಿಯನ್ನು ನೇರ ನಗದು ಮೂಲಕ ಪಾವತಿ ಮಾಡಲಾಗುತ್ತದೆ.