alex Certify ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ಚಿಕ್ಕಬಳ್ಳಾಪುರ: ವೃದ್ಧಾಪ್ಯ, ಅಂಗವಿಕಲ, ವಿಧವಾ ಪಿಂಚಣಿಗಳು ಸೇರಿದಂತೆ ಸಾಮಾಜಿಕ ಭದ್ರತೆಗೆ ಸಂಬಂಧಪಟ್ಟ ಸರ್ಕಾರದ ಎಲ್ಲಾ ಪಿಂಚಣಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಪಿಂಚಣಿಯಿಂದ ಯಾವ ಅರ್ಹ ವ್ಯಕ್ತಿಯು ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರ್ಕಾರವು ಅಸಹಾಯಕ, ಅಸಕ್ತ, ನಿರ್ಗತಿಕ ವ್ಯಕ್ತಿಗಳ ಭದ್ರತೆಗಾಗಿ ಅನೇಕ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಸದರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾದರೆ ವಿವಿಧ ಯೋಜನೆಗಳಡಿ ಪಿಂಚಣಿಗೆ ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಬೇಕು. ಈ ಕಾರ್ಯಕ್ಕಾಗಿ ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು/ಸಿಬ್ಬಂದಿಗಳು ಪ್ರತಿ ಗ್ರಾಮ ಮತ್ತು ವಾರ್ಡ್ವಾರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ಪಿಂಚಣಿಗೆ ಅರ್ಹರಿರುವವರ ಮಾಹಿತಿಯನ್ನು ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ದಾಖಲೀಕರಣ ಮಾಡಬೇಕು ನಂತರ ಪಿಂಚಣಿ ಮಂಜೂರಾತಿಗಾಗಿ ಅಗತ್ಯ ಕ್ರಮ ವಹಿಸಬೇಕು.

ಈ ಬಗ್ಗೆ ಕರಪತ್ರ ಹೊರಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಈ ಎಲ್ಲಾ ಕಾರ್ಯಗಳು ಅಭಿಯಾನದ ರೀತಿಯಲ್ಲಿ ಕೈಗೊಂಡು ಆಗಸ್ಟ್ 12 ರ ಒಳಗೆ ಮುಕ್ತಾಯವಾಗಬೇಕು ಹಾಗೂ ಈಗಾಗಲೇ ಪಿಂಚಣಿ ಮಂಜೂರಾಗಿರುವವರಿಗೆ ನಿಗಧಿತ ಅವಧಿಯಲ್ಲಿ ಪಿಂಚಣಿ ತಲುಪುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಯಾವೊಬ್ಬ ಅರ್ಹ ವ್ಯಕ್ತಿಯು ಪಿಂಚಣಿ ಸಿಕ್ಕಿಲ್ಲ ಎಂದು ಕಚೇರಿಗಳನ್ನು ಅಲೆಯಬಾರದು. ಈ ಎಲ್ಲಾ ಕಾರ್ಯಗಳ ಬಗ್ಗೆ ತಮ್ಮ ಅಧೀನದ ಅಧಿಕಾರಿ/ಸಿಬ್ಬಂದಿಗಳಿಗೆ ಅಗತ್ಯ ಸೂಚನೆಗಳನ್ನು ಇಂದೇ ನೀಡಬೇಕು ಹಾಗೂ ಅವರ ದಿನನಿತ್ಯದ ಕಾರ್ಯವೈಖರಿಯನ್ನು ಪರಿಶೀಲಿಸುವ ಮೂಲಕ ನಿಗಾವಹಿಸಬೇಕು ಎಂದು ತಹಸೀಲ್ದಾರ್‌ ಗಳಿಗೆ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...