
ದಾವಣಗೆರೆ: ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಟಾನದ ಉದ್ದೇಶದಿಂದ ಜ.22 ರಂದು ದಾವಣಗೆರೆ ತಾಲ್ಲೂಕಿನ ಆನಗೋಡು ಮತ್ತು ಮಾಯಕೊಂಡ ಹಾಗೂ ಜ.29 ರಂದು ಕಸಬಾ ಉತ್ತರ/ದಕ್ಷಿಣ ಹೋಬಳಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಬರುವ ವಿವಿಧ ಯೋಜನೆಗಳಾದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿ, ಅಂತ್ಯ ಸಂಸ್ಕಾರ, ಆದರ್ಶ ವಿವಾಹ, ಆಮ್ ಆದ್ಮಿ ಬಿಮಾ ಯೋಜನೆ, ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸಲಾಗುವುದು.
ಜ.22 ರಂದು ಆನಗೋಡು ಮತ್ತು ಮಾಯಕೊಂಡ ಹಾಗೂ ಜ.29 ರಂದು ಕಸಬಾ ಉತ್ತರ/ದಕ್ಷಿಣ ಹೋಬಳಿಗಳಲ್ಲಿ ದಾವಣಗೆರೆ ತಹಶೀಲ್ದಾರರ ಅಧ್ಯಕ್ಷತೆಯನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಖುದ್ದಾಗಿ ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಮಾಹಿತಿ ಪಡೆದಿಕೊಳ್ಳಲು ತಹಶೀಲ್ದಾರ್ ಗ್ರೇಡ್-2 ದಾವಣಗೆರೆ ಇವರು ತಿಳಿಸಿದ್ದಾರೆ.