ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪೆನ್ ಡ್ರೈವ್ ಹಂಚಿಕೆಗಾಗಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ, ಪೆನ್ ಡ್ರೈವ್ ಹಂಚಿಕೆಗಾಗಿ ಎಲ್.ಆರ್.ಶಿವರಾಮೇಗೌಡಗೆ 5 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಪ್ರಭಾವಿ ನಾಯಕ ಕೊಟ್ಟಿದ್ದಾರೆ. ಶಿವರಾಮೇಗೌಡ ಪೆನ್ ಡ್ರೈವ್ ಹಂಕಿಯ ಒಬ್ಬ ಏಜೆಂಟ್ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ 15 ದಿನ ಮೊದಲು ಶಿವರಾಮೇಗೌಡಗೆ ಹಣ ವರ್ಗಾವಣೆಯಾಗಿದೆ. ಆರಂಭದಲ್ಲಿ ಆ ವಿಚಾರ ಕೇಳಿದಾಗ ನನಗೂ ಅನುಮಾನ ಮೂಡಿತು. ಆ ವ್ಯಕ್ತಿ ಅಷ್ಟು ಬೆಲೆ ಬಾಳಲ್ಲ, ಯಾಕೆ ಅಷ್ಟು ಹಣ ಕೊಟ್ಟಿದ್ದಾರೆ ಎಂದು? ಈಗ ಸಂಶಯ ನಿಜವಾಗಿದೆ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.