ಉಡುಪಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಎಂಬುವರ ವಿರುದ್ಧ ಕಾರ್ಕಳ ತಾಲ್ಲೂಕು ಬಜಗೋಳಿ ಮುಡಾರು ಗ್ರಾಮದ ಹರೀಶ್ ದೂರು ನೀಡಿದ್ದಾರೆ.
ಪೇಜಾವರ ಶ್ರೀಗಳನ್ನು ಅವಾಚ್ಯವಾಗಿ ಏಕವಚನದಲ್ಲಿ ಮತಿನ್ ಕುಮಾರ್ ನಿಂದಿಸಿದ್ದಾರೆ. ಸುಮ್ಮನೆ ಕೂತರೆ ಸರಿ, ಮುಂದೆ ಏನಾದರೂ ನಾಟಕ ಮಾಡಿದರೆ ಎರಡನೇ ಭೀಮ್ ಕೊರೆಗಾಂವ್ ಯುದ್ಧ ಉಡುಪಿ ಮಠದ ಮುಂದೆ ಆಗುತ್ತದೆ. ಒಂದಲ್ಲ ಒಂದು ದಿನ ಯುದ್ಧ ನಡೆಯುತ್ತದೆ ಎಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರ ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.