ಪೆಗಾಸಸ್ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಕೆಲ ಸಚಿವರ ಹೆಸರುಗಳನ್ನು ತೆಗೆದುಹಾಕಿದ್ದಾರೆ. ಇದೀಗ ಕೇಸ್ನ ಪ್ರಮುಖ ಪ್ರತಿಕ್ರಿಯೆದಾರನಾಗಿ ಭಾರತದ ಒಕ್ಕೂಟವನ್ನಾಗಿ ಮಾಡಲಾಗಿದೆ.
ಹತ್ತು ಅರ್ಜಿದಾರರಲ್ಲಿ ಮೊದಲಿಗರಾದ ವಕೀಲ ಎಂ.ಎಲ್. ಶರ್ಮಾ, ಪೆಗಾಸಸ್ ಸ್ಪೈವೇರ್ ಸ್ನೂಪ್ಗೇಟ್ ಕಾಂಡದ ತನಿಖೆಯನ್ನು ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ನಡೆಸಬೇಕೆಂದು ಕೋರಿದ್ದಾರೆ.
ನವವಿವಾಹಿತೆ ಪುತ್ರಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಪಾಪಿ ತಂದೆ ಅರೆಸ್ಟ್….!
ಆಗಸ್ಟ್ 5ರಂದು ಪ್ರಕರಣ ಸಂಬಂಧ ನಡೆದ ಆಲಿಕೆಯ ವೇಳೆ ಅರ್ಜಿಯಲ್ಲಿರುವ ಕೆಲವೊಂದು ವ್ಯಕ್ತಿಗಳ ಹೆಸರುಗಳನ್ನು ಎದುರುದಾರರಾಗಿ ಉಲ್ಲೇಖಿಸಿರುವುದಕ್ಕೆ ಶರ್ಮಾರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ, ಸುಖಾಸುಮ್ಮನೇ ಹೀಗೆ ಎದುರುದಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದರು.
ಪ್ರಕರಣ ಸಂಬಂಧ ಮುಂದಿನ ಆಲಿಕೆಯನ್ನು ಆಗಸ್ಟ್ 16ರಂದು ಇಟ್ಟುಕೊಳ್ಳುವುದಾಗಿ ಮುಖ್ಯ ನ್ಯಾಯಾಧೀಶರು ತಿಳಿಸಿದ್ದಾರೆ.