ಪೇರಳೆ ಸೇವನೆಯಿಂದ ನಮ್ಮ ದೇಹದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದೇ ರೀತಿ ಪೇರಳೆಯ ಎಲೆ ಹಾಗೂ ಚಿಗುರಿನಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಪೇರಳೆಯ ಚಿಗುರಿನ ತಂಬ್ಳಿ ಮಾಡಿ ಸೇವಿಸುವುದರಿಂದ ಬಾಯಿಹುಣ್ಣು ಬಹುಬೇಗ ಕಡಿಮೆಯಾಗುತ್ತದೆ. ಇದರ ಚಿಗುರಿನ ಕಷಾಯ ತಯಾರಿಸಿ ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ನಡೆದು ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ.
ಪೇರಳೆ ಸೊಪ್ಪನ್ನು ಸ್ನಾನದ ಬೆಚ್ಚಗಿನ ನೀರಿಗೆ ಹಾಕಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ಕಜ್ಜಿ, ಅಲರ್ಜಿಯಂಥ ಸಮಸ್ಯೆಗಳು ದೂರವಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಈ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಹೆಚ್ಚಿದೆ. ಹಾಗೇ ದೇಹದ ಕಾಂತಿ ಹೆಚ್ಚಿಸಲು ಇವು ಸಹಕಾರಿ. ಮುಖದ ಮೇಲೆ ಅಲ್ಲಲ್ಲಿ ಗೆರೆ ಮತ್ತು ಸುಕ್ಕುಗಳು ಕಂಡು ಬಂದರೆ ಸೀಬೆ ಸೊಪ್ಪಿನ ಪೇಸ್ಟ್ ಬಳಸಿ. ಇವು ಮೊಡವೆಗಳು ಹಾಗೂ ಅದರ ಕಲೆಗಳನ್ನು ದೂರಮಾಡುತ್ತದೆ. ಸನ್ ಟ್ಯಾನ್, ದೇಹದ ಮೇಲಿನ ಕಪ್ಪು ಕಲೆಗಳನ್ನು ದೂರಮಾಡುತ್ತವೆ.