
ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಅತೀ ಹೆಚ್ಚು ಸಂಚಾರ ದಟ್ಟಣೆಯನ್ನು ಹೊಂದಿರುವ ನಗರದಲ್ಲಿ ರಸ್ತೆ ಬದಿಯಲ್ಲಿ ಹೆಲಿಕಾಪ್ಟರ್ ನಿಂತಿರೋದು ಟ್ರೋಲಿಗರಿಗೆ ಆಹಾರವಾಗಿದೆ.
ಎಕ್ಸ್ನಲ್ಲಿ ಈ ಘಟನೆಯ ಫೋಟೋವನ್ನು ಶೇರ್ ಮಾಡಲಾಗಿದೆ. ಹೆಲಿಕಾಪ್ಟರ್ ಹಾದು ಹೋಗುವವರೆಗೆ ಜನರು ತಮ್ಮ ಆಟೋ ಹಾಗೂ ಬೈಕ್ ನಿಲ್ಲಿಸಿದ್ದನ್ನು ಕಾಣಬಹುದಾಗಿದೆ. ಹೆಲಿಕಾಪ್ಟರ್ನಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎನ್ನಲಾಗಿದೆ. ಈ ಫೋಟೋವನ್ನು ಮೀಮ್ಸ್ ರೀತಿಯಲ್ಲಿ ಶೇರ್ ಮಾಡಲಾಗ್ತಿದೆ.
ಕೆಲವು ಅಧಿಕಾರಿಗಳು ಹೆಲಿಕಾಪ್ಟರ್ ನಿರ್ವಹಿಸೋದು ಹಾಗೂ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರೋದನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ. ಈ ಫೋಸ್ಟ್ಗೆ ಅನೇಕರು ಸಖತ್ ಕಾಮಿಡಿಯಾಗಿ ಕಮೆಂಟ್ ಮಾಡಿದ್ದಾರೆ. ಅನೇಕರು ಇಂದು ಆಫೀಸಿಗೆ ತಡವಾಗಿ ಹೋದರೆ ಹೆಲಿಕಾಪ್ಟರ್ ಬಂದ ಕಾರಣವನ್ನು ಬಾಸ್ಗೆ ನೀಡಬಹುದು ಎಂದು ಹೇಳಿದ್ದರೆ ಇನ್ನೂ ಕೆಲವರು ಇಂತಹ ಹೆಲಿಕಾಪ್ಟರ್ ಜೊತೆ ಪ್ರಯಾಣ ಮಾಡುವ ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಬೆಂಗಳೂರು ಟ್ರಾಫಿಕ್ ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.