ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ತನ್ನ ಸೃಜನಶೀಲತೆಯ ಮೇಲೆ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಶಿಷ್ಟ ಟ್ರಕ್ ಬಟ್ಟೆ ಶೋರೂಂ ನ ಫೋಟೋ ವೈರಲ್ ಆಗಿದೆ.ಎಕ್ಸ್ ನಲ್ಲಿ ಮೋಹಿತ್ ಖುರಾನಾ ಎಂಬ ಬಳಕೆದಾರರು ಫೋಟೋವನ್ನು ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಬೆಂಗಳೂರಿನ ಬೀದಿಯೊಂದರಲ್ಲಿ ಟ್ರಕ್ ನಿಲ್ಲಿಸಲಾಗಿದ್ದು, ಈ ಟ್ರಕ್ ಅನ್ನು ವಾಕ್-ಇನ್ ಉಡುಪುಗಳ ಶೋರೂಂ ಆಗಿ ಪರಿವರ್ತಿಸಲಾಗಿತ್ತು, ಒಳಗೆ ಹಲವಾರು ಬಟ್ಟೆಗಳನ್ನು ಪ್ರದರ್ಶಿಸಲಾಗಿತ್ತು. ಟ್ರಕ್ ಒಳಗೆ ಇರುವ ಬಟ್ಟೆಗಳು ಹೊರಕ್ಕೆ ಕಾಣುತ್ತದೆ. ಈ ಟ್ರಕ್ನಲ್ಲಿ ಬಟ್ಟೆಗಳನ್ನು ಬಹಳ ಸೊಗಸಾಗಿ ಪ್ರದರ್ಶಿಸಲಾಗಿದೆ.
ಈ ಶೋರೂಂ ನಗರದಾದ್ಯಂತ ಚಲಿಸುವ ಸ್ವಾತಂತ್ರ್ಯವನ್ನು ಹೊಂದಿದ್ದು, ಸ್ಟೈಲಿಶ್ ಬಟ್ಟೆ ಆಯ್ಕೆಗಳನ್ನು ನೇರವಾಗಿ ವಿವಿಧ ಸ್ಥಳಗಳಲ್ಲಿ, ಮನೆ ಮನೆಗೆ ಗ್ರಾಹಕರಿಗೆ ತಲುಪಿಸುತ್ತದೆ.