alex Certify ಬೆಂಗಳೂರು ಟ್ರಾಫಿಕ್ ಕಿರಿಕಿರಿಯ ಸೂಚಕ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಟ್ರಾಫಿಕ್ ಕಿರಿಕಿರಿಯ ಸೂಚಕ ಈ ಫೋಟೋ

ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗಳು ಮಾತ್ರ ಯಾವ ಕಾಲಕ್ಕೂ ಸರಿ ಹೋಗುವಂತೆ ಕಾಣುವುದಿಲ್ಲ. 21ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ನಗರವು ವ್ಯಾಪಕವಾಗಿ ಬೆಳೆಯುತ್ತಿದ್ದರು, ಅದಕ್ಕೆ ಪೂರಕವಾಗಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಜಾಲವನ್ನು ನಿರ್ಮಾಣ ಮಾಡದೇ ಇರುವ ಕಾರಣ ಸಂಚಾರ ದಟ್ಟಣೆ ಎಂಬುದು ರಾಜಧಾನಿ ಮಟ್ಟಿಗೆ ಶಾಪವಾಗಿಬಿಟ್ಟಿದೆ.

ನಗರದ ಸಂಚಾರದ ದಟ್ಟಣೆಯನ್ನು ಜೀವನದ ಭಾಗವಾಗಿ ಸ್ವೀಕರಿಸಿರುವ ಬೆಂಗಳೂರಿಗರು, ಕೆಲವೊಮ್ಮೆ ಇದರ ಬಗ್ಗೆಯೂ ಹಗುರವಾದ ನಗೆ ಚಟಾಕಿಗಳನ್ನು ಸಿಡಿಸುತ್ತಾರೆ. ಮೀಮ್ ಹಾಗೂ ರೀಲ್ಸ್ ಜಮಾನಾದಲ್ಲಿ ಸಂಚಾರ ದಟ್ಟಣೆಯೂ ಒಂದು ಕಂಟೆಂಟ್ ಆಗಿದೆ.

ಕೋರಮಂಗಲ-ಅಗರ ನಡುವಿನ ರಿಂಗ್ ರೋಡ್‌ನಲ್ಲಿ ರ‍್ಯಾಪಿಡೋ ಸ್ಕೂಟರ್‌ ಒಂದನ್ನು ಏರಿರುವ ಮಹಿಳೆಯೊಬ್ಬರು ಸಂಚಾರ ದಟ್ಟಣೆಯ ನಡುವೆಯೇ ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡುತ್ತಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಸಂಚಾರ ದಟ್ಟಣೆಯ ಕಾರಣದಿಂದ ತಂತಮ್ಮ ಕಚೇರಿಗಳಿಗೆ ಸೂಕ್ತ ಸಮಯಕ್ಕೆ ತಲುಪಲು ವಿಫಲರಾಗಿ ಹತಾಶಗೊಂಡ ನೆಟ್ಟಿಗರು ತಮ್ಮ ಅಳಲನ್ನು ಈ ಟ್ವೀಟ್‌ನ ಕಾಮೆಂಟ್ ವಿಭಾಗದಲ್ಲಿ ತೋಡಿಕೊಂಡಿದ್ದಾರೆ.

ಈ ಟ್ವೀಟ್‌ಗೆ ಸ್ಪಂದಿಸಿದ ಸಂಚಾರ ಡಿಸಿಪಿ ಸುಜೀತಾ ಸಲ್ಮಾನ್, “ಹೊರ ವರ್ತುಲ ರಸ್ತೆಯ ಇಬ್ಬಲೂರು ಬಳಿ ಇರುವ ಸರ್ವಿಸ್ ರಸ್ತೆಯ ಮಿಲಿಟರಿ ಗೇಟ್ ಬಳಿ ಟ್ರಕ್ ಮರಕ್ಕೆ ಡಿಕ್ಕಿ ಹೊಡೆದಿದ್ದು ಮರ ಕೆಳಗೆ ಬಿದ್ದು ಸಂಚಾರದಟ್ಟಣೆ ಉಂಟಾಗಿರುತ್ತದೆ, ಸಿಲ್ಕ್ ಬೋರ್ಡ್ ನಿಂದ ಇಬ್ಬುಲೂರು ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಬದಲಿ ರಸ್ತೆ ಮಾರ್ಗದಲ್ಲಿ ಚಲಿಸಲು ಈ ಮೂಲಕ ಕೋರಲಾಗಿದೆ,” ಎಂದಿದ್ದಾರೆ.

“ಒಬ್ಬ ಟ್ರಕ್ ಚಾಲಕನಿಂದ ಜಗತ್ತಿನ ಅನೇಕ ಕಂಪನಿಗಳ ಉದ್ಯೋಗಿಗಳಿಗೆ ತಮ್ಮ ಕಚೇರಿಗಳಿಗೆ ತಲುಪಲು ಹೀಗೆ ತೊಂದರೆ ಮಾಡಿದ್ದಾನೆ ಅನ್ನಿ!,” ಎಂದು ನೆಟ್ಟಿಗರೊಬ್ಬರು ತಮ್ಮ ಹತಾಶೆಯನ್ನು ವ್ಯಂಗ್ಯವಾಗಿ ತೋಡಿಕೊಂಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...