ಹಿಂದೂ ಧರ್ಮದಲ್ಲಿ ನವಿಲು ಗರಿಗೆ ವಿಶೇಷ ಮಹತ್ವವಿದೆ. ಶ್ರೀಕೃಷ್ಣ ನವಿಲುಗರಿ ಪ್ರಿಯ. ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಇರುವುದ್ರಿಂದ ನವಿಲು ಗರಿ ಮಹತ್ವ ಮತ್ತಷ್ಟು ಹೆಚ್ಚಾಗಿದೆ.
ಮನೆಯ ಮುಖ್ಯದ್ವಾರ ವಾಸ್ತು ದೋಷಕ್ಕೆ ವಿರುದ್ಧವಾಗಿದ್ದರೆ ಮನೆಯ ಮುಖ್ಯ ದ್ವಾರದಲ್ಲಿ ನವಿಲು ಗರಿಯನ್ನಿಡಿ. ಇದು ಎಲ್ಲ ದೋಷಗಳನ್ನು ಕಡಿಮೆ ಮಾಡುತ್ತದೆ.
ಶನಿ ದೋಷವಿದ್ದವರು ಶನಿವಾರ ಮೂರು ನವಿಲು ಗರಿಯನ್ನು ತಂದು ಕಪ್ಪು ದಾರದಲ್ಲಿ ಕಟ್ಟಿ ಒಂದು ಬಟ್ಟಲಿನಲ್ಲಿ ನವಿಲು ಗರಿ ಜೊತೆ ಮೂರು ಅಡಿಕೆಯನ್ನು ಇಡಿ. ಅದಕ್ಕೆ ಗಂಗಾಜಲ ಹಾಕಿ ‘ಓಂ ಶನೇಶ್ವರಾಯ ನಮಃ’ ಮಂತ್ರ ಜಪಿಸಿ. ನಂತ್ರ ಮೂರು ಮಣ್ಣಿನ ದೀಪವನ್ನು ಶನಿ ದೇವನಿಗೆ ಅರ್ಪಿಸಿ. ಜೊತೆಗೆ ಗುಲಾಬ್ ಜಾಮೂನು ಅಥವಾ ಸಿಹಿ ವಸ್ತುವನ್ನು ದಾನವಾಗಿ ನೀಡಿ.
ಪ್ರತಿಯೊಂದು ವಾರ ಹಾಗೂ ಪ್ರತಿಯೊಂದು ದೋಷಕ್ಕೆ ನವಿಲು ಗರಿಯಲ್ಲಿ ಪರಿಹಾರವಿದೆ. ಗ್ರಹ ದೋಷವಿರುವವರು ಆಯಾ ದಿನ ಶಾಸ್ತ್ರದಲ್ಲಿ ಹೇಳಿದಂತೆ ನವಿಲು ಗರಿಯನ್ನು ಪೂಜೆ ಮಾಡಿದಲ್ಲಿ ಫಲ ಪ್ರಾಪ್ತಿಯಾಗಲಿದೆ.