ಬೆಂಗಳೂರು : ರಾಷ್ಟ್ರೀಯ ರೈತ ದಿನದ ಈ ಸಂದರ್ಭದಲ್ಲಿ ನಾಡಿನ ಪ್ರತಿ ಅನ್ನದಾತನ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎನ್ನುವ ಗ್ಯಾರಂಟಿ ನೀಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಕಳೆದ ಒಂದೂವರೆ ವರ್ಷಗಳಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ನೀಡಿರುವ ಕಾರ್ಯಕ್ರಮಗಳು ಹೀಗಿವೆ..
ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಿಸಲು ಕ್ರಮ
ಪಾವಗಡ ಸೋಲಾರ್ ಪಾರ್ಕ್ ಮಾದರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಮಾಲೀಕತ್ವವಿರುವ ಜಮೀನಿನಲ್ಲಿ ಮತ್ತು ಜಲಾಶಯಗಳ ಹಿನ್ನೀರಿನಲ್ಲಿ ಸೂಕ್ತ ಮಾದರಿಯ ಸೋಲಾರ್ ಪಾರ್ಕ್ಗಳ ಸ್ಥಾಪನೆಗೆ ಯೋಜನೆ
ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಿಸಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಯೋಜನೆ ರೂಪು
ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪ್ರಾರಂಭ
ರಾಜ್ಯದ 8.90 ಲಕ್ಷ ಹಾಲು ಉತ್ಪಾದಕರಿಗೆ ₹649.76 ಕೋಟಿ ಪ್ರೋತ್ಸಾಹಧನ ನೇರ ಖಾತೆಗೆ ಜಮೆ
16,615 ರಾಸುಗಳ ಆಕಸ್ಮಿಕ ಸಾವಿಗೆ ಅವುಗಳ ಮಾಲೀಕರಿಗೆ ₹6.98 ಕೋಟಿ ಪರಿಹಾರ ವಿತರಣೆ
16,895 ಕುರಿ / ಮೇಕೆಗಳ ಆಕಸ್ಮಿಕ ಸಾವಿಗೆ ಅವುಗಳ ಮಾಲೀಕರಿಗೆ ₹8.12 ಕೋಟಿ ಪರಿಹಾರ ವಿತರಿಸಲು ಕ್ರಮ
ಜಾನುವಾರುಗಳ ಸಾಂಕ್ರಾಮಿಕ ರೋಗ ಕಾಲು ಬಾಯಿ ಜ್ವರ ಬಾರದಂತೆ ತಡೆಯಲು 99.07 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಗೂ ಚರ್ಮಗಂಟು ರೋಗ ಬಾರದಂತೆ ತಡೆಯಲು 72.52 ಲಕ್ಷ ದನಗಳಿಗೆ ಲಸಿಕೆ
₹10 ಕೋಟಿ ವೆಚ್ಚದಲ್ಲಿ ರಾಜ್ಯದ ಆಯ್ದ 20 ತಾಲೂಕುಗಳ ಪಶು ಆಸ್ಪತ್ರೆಗಳು ಮೇಲ್ದರ್ಜೆಗೆ
ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಪಶುವೈದ್ಯ ಸಂಸ್ಥೆಗಳಿಗೆ ₹100 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ
ರಾಷ್ಟ್ರೀಯ ರೈತ ದಿನದ ಈ ಸಂದರ್ಭದಲ್ಲಿ ನಾಡಿನ ಪ್ರತಿ ಅನ್ನದಾತನ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎನ್ನುವ ಗ್ಯಾರಂಟಿ ನೀಡುತ್ತಿದ್ದೇವೆ.
ಕಳೆದ ಒಂದೂವರೆ ವರ್ಷಗಳಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ನೀಡಿರುವ ಕಾರ್ಯಕ್ರಮಗಳು ಹೀಗಿವೆ.. #KrushiKushi #NationalFarmersDay pic.twitter.com/WQX6qj6wuR
— DIPR Karnataka (@KarnatakaVarthe) December 23, 2024