ಬೆಂಗಳೂರು: ಗ್ರಾಮಸ್ಥರೇ ಸ್ವಂತ ಹಣ ಭರಿಸಿ ನಿರ್ಮಿಸಿದ ಕಾಮಗಾರಿಗೆ ಗುತ್ತಿಗೆದಾರರ ನಕಲಿ ಪರವಾನಿಗೆ ಮತ್ತು ಬಿಲ್ ಸೃಷ್ಟಿಸಿ ಪಿಡಿಒ ಹಣ ದೋಚಿದ ಘಟನೆ ಆನೇಕಲ್ ತಾಲೂಕಿನ ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಕೆ. ಪಾಳ್ಯ ವಾರ್ಡ್ ನಲ್ಲಿ ನಡೆದಿದೆ.
ಪಿಡಿೊ ರಮೇಶ್ ವಿರುದ್ಧ ಹಣ ದುರುಪಯೋಗ ಆರೋಪ ಕೇಳಿ ಬಂದಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಇಲಾಖೆಯ ವಿಚಾರಣೆ ಮತ್ತು ತನಿಖೆಯಲ್ಲಿ ನಿಯಮ ಪಾಲನೆ ಮಾಡದೆ ಕಾಮಗಾರಿ ನಡೆಸದ ವ್ಯಕ್ತಿ ಹೆಸರಿಗೆ 3.30 ಲಕ್ಷ ರು ಚೆಕ್ ಬರೆದು ಹಣ ಪಡೆದ ಬಗ್ಗೆ ದಾಖಲೆಸಹಿತ ಸಾಬೀತಾಗಿದೆ.
ಅಮಾನತು ಆದೇಶ ಹೊರಡಿಸಿದ್ದರೂ ಬೆಂಗಳೂರು ಉತ್ತರ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿಗೆ ತಾತ್ಕಾಲಿಕ ಪಿಡಿಒ ಆಗಿ ಕೆಲಸ ನಿರ್ವಹಿಸಲು ರಮೇಶ್ ಗೆ ಅವಕಾಶ ಕಲ್ಪಿಸಲಾಗಿದೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.