
ಬೆಂಗಳೂರು: 1,500 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಪಿಡಿಓಗಳಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮುಂಬಡ್ತಿ ನೀಡಲಾಗಿದೆ. ಹುದ್ದೆಗಳನ್ನು ಉನ್ನತೀಕರಿಸಿ ಮರು ಪದನಾಮಕರಣ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಮಂಜೂರಾದ 1500 ಪಿಡಿಓ ಹುದ್ದೆಗಳನ್ನು ಮುಂಬಡ್ತಿ ನೀಡಲಾಗಿದ್ದು, 40,900 -78,200 ರೂಪಾಯಿ ವೇತನ ಶ್ರೇಣಿಯ ಗ್ರೂಪ್ ಬಿ ಕಿರಿಯ ವೃಂದದಲ್ಲಿ ಉನ್ನತೀಕರಿಸಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮರು ಪದನಾಮಕರಣ ಮಾಡಲಾಗಿದೆ.
4521 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್ ಸಿ ವೃಂದದ 37,900 -70,850 ರೂ. ವೇತನ ಶ್ರೇಣಿಯಲ್ಲಿ ಮುಂದುವರಿಸಲಾಗಿದೆ.