ಬೆಂಗಳೂರು: ಪಿಡಿಒ ಪರೀಕ್ಷಾರ್ಥಿಗಳಿಗೆ ಬಿಎಂಆರ್‌ಸಿಎಲ್ ನಿಂದ ಸಿಹಿ ಸುದ್ದಿ ನೀಡಲಾಗಿದೆ. ಡಿಸೆಂಬರ್ 8ರಂದು ಪಿಡಿಒ ಪರೀಕ್ಷೆ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಭಾನುವಾರ ಬೆಳಗ್ಗೆ 7 ಗಂಟೆಯ ಬದಲಾಗಿ ಮುಂಜಾನೆ 5.30ರಿಂದಲೇ ಮೆಟ್ರೋ ಸಂಚಾರ ಇರುತ್ತದೆ 4 ಮೆಟ್ರೋ ಟರ್ಮಿನಲ್ ಸ್ಟೇಷನ್ ಗಳಿಂದಲೂ ಮುಂಜಾನೆ 5.30ರಿಂದ ಬೆಳಗ್ಗೆ 7 ಗಂಟೆಯವರೆಗೆ ಅರ್ಧ ಗಂಟೆಗೊಂದು ರೈಲು ಸಂಚಾರ ಇರುತ್ತದೆ.
ಪ್ರತಿ ಭಾನುವಾರ ಬೆಳಗ್ಗೆ 7ರಿಂದ ಮೆಟ್ರೋ ರೈಲು ಸಂಚಾರ ಮಾಡುತ್ತಿತ್ತು. ಬೆಳಗ್ಗೆ 7 ಗಂಟೆ ನಂತರ ಎಂದಿನಂತೆ ಮೆಟ್ರೋ ರೈಲು ಸಂಚಾರ ಇರಲಿದೆ. ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣಗಳಿಂದ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಮೊದಲ ರೈಲು ಬೆಳಗ್ಗೆ 5.30ಕ್ಕೆ ಹೊರಡಲಿದೆ. PDO ಪರೀಕ್ಷಾರ್ಥಿಗಳು, ಸಾರ್ವಜನಿಕರು ಸದುಪಯೋಗ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.