alex Certify ಮಹಿಳೆಯರಿಗೆ ಏಕೆ ಹೆಚ್ಚಾಗ್ತಿದೆ ಪಿಸಿಓಡಿ ? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಏಕೆ ಹೆಚ್ಚಾಗ್ತಿದೆ ಪಿಸಿಓಡಿ ? ಇಲ್ಲಿದೆ ವಿವರ

ಬದಲಾಗುತ್ತಿರುವ ಜೀವನಶೈಲಿ, ಆಹಾರದಲ್ಲಿ ವ್ಯತ್ಯಾಸ, ಫಿಟ್ನೆಸ್‌ ಕೊರತೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಹಿಳೆಯರಿಗೆ ದುಬಾರಿಯಾಗಿ ಪರಿಗಣಿಸುತ್ತಿದೆ. ಇದೇ ಕಾರಣಕ್ಕೆ ಅನೇಕ  ಪಾಲಿ ಸಿಸ್ಟಿಕ್ ಓವೇರಿಯನ್ ಡಿಸೀಸ್ ಅಂದರೆ ಪಿಸಿಓಡಿ ಸಮಸ್ಯೆಗೆ ಒಳಗಾಗ್ತಿದ್ದಾರೆ. ಹತ್ತರಲ್ಲಿ ನಾಲ್ಕು ಮಂದಿಗೆ ಪಿಸಿಓಡಿ ಸಮಸ್ಯೆ ಕಾಡ್ತಿದೆ.

ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳು ಅಸಮತೋಲನದಿಂದ ಈ ಸಮಸ್ಯೆ ಕಾಡುತ್ತದೆ. ಅಂಡಾಶಯದಲ್ಲಿ ಉಂಡೆಗಳು ಅಥವಾ ಚೀಲಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಪಿರಿಯಡ್ಸ್‌ ಸರಿಯಾಗಿ ಆಗದ ಕಾರಣ ಅನೇಕ ಸಮಸ್ಯೆಯನ್ನು ಮಹಿಳೆಯರು ಎದುರಿಸುತ್ತಾರೆ. ಇದ್ರಲ್ಲಿ ಸಂತಾನ ಭಾಗ್ಯ ದೊಡ್ಡ ಸಮಸ್ಯೆ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಪಿಸಿಓಡಿ ಅಪಾಯವನ್ನು ಕಡಿಮೆ ಮಾಡಬಹುದು.

ಪಿಸಿಓಡಿ ಸಮಸ್ಯೆ ನಿಮ್ಮನ್ನು ಕಾಡಬಾರದು ಅಥವಾ ಅದ್ರ ಪರಿಣಾಮ ಕಡಿಮೆ ಆಗ್ಬೇಕು ಎನ್ನುವವರು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಬಹಳ ಮುಖ್ಯ. ಕರಿದ ಆಹಾರಗಳಿಂದ ಇಂಥ ಮಹಿಳೆಯರು ದೂರ ಇರಬೇಕು. ಕಾರ್ಬೋಹೈಡ್ರೇಟ್ ಭರಿತ ಆಹಾರವನ್ನು ಸೇವನೆ ಮಾಡಬೇಕು.

ಆರೋಗ್ಯಕರ ಆಹಾರದ ಜೊತೆ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮ, ಜಿಮ್‌, ಯೋಗ, ಆಟ ಸೇರಿದಂತೆ ಒಂದಲ್ಲ ಒಂದು ದೈಹಿಕ ವ್ಯಾಯಾಮದಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳಬೇಕು.

ಇದಲ್ಲದೆ ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಂದ ದೂರವಿರುವುದು ಮುಖ್ಯವಾಗುತ್ತದೆ. ಇವೆಲ್ಲ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತವೆ.

ಕೆಫೀನ್‌ ಸೇವನೆಯನ್ನು ಸಂಪೂರ್ಣ ನಿಲ್ಲಿಸಬೇಕು. ಕೆಫೀನ್‌ ಆಹಾರ ತಲೆನೋವು, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಇದಲ್ಲದೆ ಒತ್ತಡದಿಂದ ಮುಕ್ತರಾಗಿರುವುದು ಬಹಳ ಮುಖ್ಯ. ಒತ್ತಡ ಅನೇಕ ರೋಗಕ್ಕೆ ಮೂಲವಾಗಿದೆ. ಪಿಸಿಓಡಿ ಹೆಚ್ಚಳಕ್ಕೂ ಇದೇ ಕಾರಣ ಎಂಬುದು ನೆನಪಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...