alex Certify ಐಸಿಸಿ ನಿಯಮ ಉಲ್ಲಂಘನೆ…!‌ ಕೊಲಂಬೊ ಕ್ಯಾಸಿನೊಗೆ ಭೇಟಿ ನೀಡಿದ ಪಿಸಿಬಿ ಮ್ಯಾನೇಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಸಿ ನಿಯಮ ಉಲ್ಲಂಘನೆ…!‌ ಕೊಲಂಬೊ ಕ್ಯಾಸಿನೊಗೆ ಭೇಟಿ ನೀಡಿದ ಪಿಸಿಬಿ ಮ್ಯಾನೇಜರ್

ಕೊಲೊಂಬೋ: ಪಾಕಿಸ್ತಾನ ತಂಡದ ಪ್ರಸ್ತುತ ಮಾಧ್ಯಮ ವ್ಯವಸ್ಥಾಪಕ ಉಮರ್ ಫಾರೂಕ್ ಕಲ್ಸನ್ ಮತ್ತು ಮಂಡಳಿಯ ಜಿಎಂ (ಅಂತರರಾಷ್ಟ್ರೀಯ ಕ್ರಿಕೆಟ್) ಅದ್ನಾನ್ ಅಲಿ ಅವರು ಕೊಲಂಬೊ ಕ್ಯಾಸಿನೊಗೆ ಭೇಟಿ ನೀಡಿದ ಚಿತ್ರಗಳು ಮತ್ತು ವಿಡಿಯೋ ವೈರಲ್ ಆಗಿದ್ದು, ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಏಷ್ಯಾ ಕಪ್‌ಗಾಗಿ ಪಾಕಿಸ್ತಾನಿ ತಂಡದ ಭಾಗವಾಗಿ ಇಬ್ಬರೂ ಪಿಸಿಬಿ ಅಧಿಕಾರಿಗಳು ಕೊಲಂಬೊ ಪ್ರವಾಸದಲ್ಲಿದ್ದಾರೆ. ಜೂಜಿನ ಅಡ್ಡೆಗೆ ಭೇಟಿ ನೀಡುವುದು ಐಸಿಸಿಯ ನಿಯಮದ ವಿರುದ್ಧವಾಗಿದೆ. ಏಕೆಂದರೆ ಇದು ನೀತಿ ಸಂಹಿತೆಯ ಪ್ರಕಾರ ನಿಷೇಧಿತ ಸ್ಥಳಗಳಲ್ಲಿ ಒಂದಾಗಿದೆ.

ಪಿಸಿಬಿಯ ಅಧಿಕಾರಿಗಳು ಜೂಜಾಟದಲ್ಲಿ ಪಾಲ್ಗೊಳ್ಳುವಷ್ಟು ಅಸಡ್ಡೆಯಿಂದ ಏಕೆ ವರ್ತಿಸಿದ್ರು ಅಂತಾ ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅಲ್ಲದೆ ಹಲವರು ಪಿಸಿಬಿ ಅಧಿಕಾರಿಗಳ ಈ ನಡೆಯನ್ನು ಟೀಕಿಸಿದ್ದಾರೆ.

ಇನ್ನು ಕ್ಯಾಸಿನೊ ಭೇಟಿಯ ದೃಶ್ಯ ವೈರಲ್ ಆಗುತ್ತಿದ್ದಂತೆ, ಪಿಸಿಬಿ ಅಧಿಕಾರಿಗಳು ತಾವು ಕ್ಯಾಸಿನೊಗೆ ರಾತ್ರಿಯ ಊಟಕ್ಕೆಂದು ತೆರಳಿದ್ದೆವು ಎಂದು ತಿಳಿಸಿದ್ದಾರೆ. ಆದರೆ, ಅವರ ಈ ಹೇಳಿಕೆಯು ಅಪಹಾಸ್ಯಕ್ಕೊಳಗಾಯ್ತು. ಕ್ಯಾಸಿನೊಗೆ ಊಟ ಮಾಡಲೆಂದು ಯಾರು ಹೋಗುತ್ತಾರೆ? ಆಹಾರಕ್ಕಾಗಿ ಯಾರಾದ್ರೂ ಕ್ಯಾಸಿನೊಗೆ ಭೇಟಿ ನೀಡುತ್ತಾರಾ? ನೀವು ಜನರನ್ನು ಮೂರ್ಖರೆಂದು ತಿಳಿದಿದ್ದೀರೆ ಎಂದು ಕ್ರಿಕೆಟ್ ಬರಹಗಾರ ಒಮೈರ್ ಅಲವಿ ಟೀಕಿಸಿದ್ದಾರೆ.

ಇನ್ನು ಟೆಸ್ಟ್ ತಂಡದಲ್ಲಿ ಆಡುತ್ತಿದ್ದ ಮಾಜಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಮೊಹ್ಸಿನ್ ಖಾನ್, ಪಂದ್ಯಾವಳಿಯ ಸಮಯದಲ್ಲಿ ಕ್ಯಾಸಿನೊಗೆ ಹೋದ ಇಬ್ಬರು ಪಿಸಿಬಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, 2015 ರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ, ತಂಡದ ಮ್ಯಾನೇಜರ್ ಮತ್ತು ಮುಖ್ಯ ಆಯ್ಕೆಗಾರರಾಗಿದ್ದ ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್ ಮತ್ತು ಅವರ ಪತ್ನಿ ಕ್ರೈಸ್ಟ್‌ಚರ್ಚ್‌ನ ಕ್ಯಾಸಿನೊಗೆ ಭೇಟಿ ನೀಡಿದ್ದರು. ಇದು ತಿಳಿದ ಕೂಡಲೇ ಪಂದ್ಯಾವಳಿಯ ಮಧ್ಯದಲ್ಲಿಯೇ ಅವರನ್ನು ಪಾಕಿಸ್ತಾನಕ್ಕೆ ಮರಳಿ ಕರೆಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...