ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇಡೀ ವಿಶ್ವವೇ ಫೆಬ್ರವರಿ 12-13ರಂದು ನಡೆಯುವ ಮೆಗಾ ಹರಾಜಿನ ಮೇಲೆ ಕಣ್ಣಿಟ್ಟಿದೆ. ಈ ಮಧ್ಯೆ ಪಂಜಾಬ್ ಕಿಂಗ್ಸ್ ಸಹ ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಐಪಿಎಲ್ 2022 ರ ಮೆಗಾ ಹರಾಜಿನಿಂದ ಹೊರ ನಡೆದಿದ್ದಾರೆ. ಪ್ರೀತಿ ಇತ್ತೀಚೆಗಷ್ಟೇ ತಾಯಿಯಾಗಿದ್ದಾರೆ. ಕೊರೊನಾ ದೃಷ್ಟಿಯಿಂದ ಅವರು ಮಗುವನ್ನು ಬಿಟ್ಟು ಭಾರತಕ್ಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಐಪಿಎಲ್ 2021 ರ ಮೆಗಾ ಹರಾಜು ಫೆಬ್ರವರಿ 12-13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಾರಿ 8ರ ಬದಲು 10 ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ. 47 ವರ್ಷದ ಪ್ರೀತಿ ಜಿಂಟಾ ಹರಾಜಿಗೆ ಒಂದು ದಿನ ಮೊದಲು ಅಂದ್ರೆ ಇಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ.
ನಾನು ಈ ಬಾರಿ ಐಪಿಎಲ್ ಹರಾಜು 2022 ರಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ನನ್ನ ಪುಟ್ಟ ಮಗುವನ್ನು ಬಿಟ್ಟು ಭಾರತಕ್ಕೆ ಬರಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ನಾನು ಮತ್ತು ನನ್ನ ತಂಡ ಹರಾಜು ಮತ್ತು ಕ್ರಿಕೆಟ್ನ ಎಲ್ಲಾ ವಿಷಯಗಳನ್ನು ಒಟ್ಟಿಗೆ ಚರ್ಚಿಸುವುದರಲ್ಲಿ ನಿರತರಾಗಿದ್ದೇವೆ. ಅಭಿಮಾನಿಗಳು ತಂಡಕ್ಕೆ ಯಾವ ಸಲಹೆ ನೀಡ್ತಾರೆ ಎಂಬುದನ್ನು ಕೇಳುವ ಕುತೂಹಲ ನಮಗಿದೆ ಎಂದು ಟ್ವೀಟ್ ಮಾಡಿದ್ದಾರೆ.