ಹಬ್ಬ ಹತ್ತಿರ ಬರ್ತಿದ್ದಂತೆ ಸಂಭ್ರಮ ಒಂದುಕಡೆ ಆದ್ರೆ ಭಯ ಇನ್ನೊಂದು ಕಡೆ. ಖರ್ಚು ಹೆಚ್ಚಾಗುವ ಕಾರಣ ಜೇಬು ಖಾಲಿಯಾಗಿರುತ್ತದೆ. ಖಾತೆಯಲ್ಲಿ ಹಣವಿಲ್ಲದೆ, ಸಾಲ ಮಾಡುವ ಮನಸ್ಸಿಲ್ಲದೆ ಅನೇಕರು ಒದ್ದಾಡುತ್ತಾರೆ. ಹಬ್ಬದ ಸಮಯದಲ್ಲಿ ನಿಮ್ಮ ಖಾತೆಯಲ್ಲೂ ಹಣವಿಲ್ಲ ಎಂದಾದ್ರೆ ಬೇಸರಪಟ್ಟುಕೊಳ್ಬೇಡಿ. ಬೇರೆಯವರ ಮುಂದೆ ಕೈಚಾಚಲು ಹೋಗ್ಬೇಡಿ. ಪೇಟಿಎಂ ಪೋಸ್ಟ್ ಪೇಯ್ಡ್ ನಿಮಗೆ ಭರ್ಜರಿ ಆಫರ್ ನೀಡ್ತಿದೆ. ಈ ಆಫರ್ ಅಡಿ ನೀವು ಮೊದಲು ಖರ್ಚು ಮಾಡಿ ನಂತ್ರ ಹಣ ಪಾವತಿ ಮಾಡ್ಬಹುದು.
ದೇಶದ ಅನೇಕ ಕಂಪನಿಗಳು ಬೈ ನೌವ್, ಪೇ ಲೇಟರ್ ಆಯ್ಕೆ ನೀಡುತ್ತವೆ. ಪೇಟಿಎಂ ತನ್ನ ಪೇಟಿಎಂ ಪೋಸ್ಟ್ ಪೇಯ್ಡ್ ನಲ್ಲಿ ಈ ಆಯ್ಕೆಯನ್ನು ನೀಡುತ್ತದೆ. ಪೇಟಿಎಂ ಗ್ರಾಹಕರ ಪೋಸ್ಟ್‌ಪೇಯ್ಡ್ ಖಾತೆಯಲ್ಲಿ ಕ್ರೆಡಿಟ್ ಮಿತಿ ಇರುತ್ತದೆ. ಈ ಮಿತಿಯ ಪ್ರಕಾರ ನೀವು ಹಣ ಖರ್ಚು ಮಾಡಬಹುದು. ನೀವು ರೀಚಾರ್ಜ್, ಬಿಲ್ ಪಾವತಿ ಅಥವಾ ಶಾಪಿಂಗ್ ಇತ್ಯಾದಿಗಳನ್ನು ಆರಾಮವಾಗಿ ಮಾಡ್ಬಹುದು. ಆನ್ಲೈನ್ ಮತ್ತು ಆಫ್ ಲೈನ್ ಎರಡೂ ಸೌಲಭ್ಯ ಲಭ್ಯವಿದ್ದು, ಮೊದಲು ಖರೀದಿ ಮಾಡಿ ನಂತ್ರ ನೀವು ಪಾವತಿ ಮಾಡಬಹುದು.
ಪೇಟಿಎಂ ಪೋಸ್ಟ್ ಪೇಯ್ಡ್ ಮೂಲಕ ನೀವು ಮಾಡಿದ ಪಾವತಿಯನ್ನು ಇಎಂಐ ಆಗಿ ಪರಿವರ್ತಿಸಬಹುದು. ಅಲ್ಲದೆ ನಿಮಗೆ ಹಣ ಪಾವತಿಸಲು 37 ದಿನಗಳ ಅವಕಾಶವಿರುತ್ತದೆ. ಪೇಟಿಎಂಗೆ ಲಾಗಿನ್ ಆಗಿ ಪೇಟಿಎಂ ಪೋಸ್ಟ್ ಪೇಯ್ಡ್ ಅಂತಾ ಸರ್ಚ್ ಮಾಡಿದ್ರೆ ಅದು ಸಿಗುತ್ತದೆ. ನಂತ್ರ ಕೆವೈಸಿ ಭರ್ತಿ ಮಾಡಿದ್ರೆ ನೀವು ಇದನ್ನು ಬಳಸಲು ಅರ್ಹರಾಗುತ್ತೀರಿ.