alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 10 – 12 ನೇ ತರಗತಿ ಪಾಸಾದವರಿಗೆ 20 ಸಾವಿರಕ್ಕೂ ಅಧಿಕ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 10 – 12 ನೇ ತರಗತಿ ಪಾಸಾದವರಿಗೆ 20 ಸಾವಿರಕ್ಕೂ ಅಧಿಕ ಉದ್ಯೋಗ

A fruit stall advertises the use of the Paytm digital payment system in Mumbai,

ಫೈನಾನ್ಶಿಯಲ್​ ಸರ್ವೀಸ್​ ವೇದಿಕೆಯಾದ ಪೇಟಿಎಂ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಪೇಟಿಎಂ ಫೀಲ್ಡ್ ಸೇಲ್ಸ್​ ಎಕ್ಸಿಕ್ಯೂಟಿವ್​ ಯೋಜನೆ ಆರಂಭಿಸಿದ್ದು, ಇದಕ್ಕಾಗಿ ಪದವಿ ಪೂರ್ವ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದೆ.

ಪೇಟಿಎಂ ಸಂಸ್ಥೆಯು ಸೇಲ್ಸ್​ ಎಕ್ಸಿಕ್ಯೂಟಿವ್​ ಹುದ್ದೆಗೆ 20,000 ಮಂದಿಯನ್ನ ನಿಯೋಜನೆ ಮಾಡಲಿದೆ. ಇವರು ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಡಿಜಿಟಲ್​ ಸೇವೆಯ ಬಗ್ಗೆ ತಿಳಿಸುತ್ತಾರೆ ಹಾಗೂ ಸಂಸ್ಥೆಯ ವಿವಿಧ ಡಿಜಿಟಲ್​ ಸೇವೆಗಳನ್ನು ಬಳಸುವಂತೆ ಉತ್ತೇಜಿಸುತ್ತಾರೆ.

ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್​​ ಹುದ್ದೆಗೆ ನೇಮಕಗೊಂಡವರಿಗೆ ಪ್ರತಿ ತಿಂಗಳು 35 ಸಾವಿರ ರೂಪಾಯಿವರೆಗೆ ಗಳಿಸಲು ಅವಕಾಶ ಇದೆ.

ಈ ಪಿಎಸ್​​ಇಗಳು ಪೇಟಿಎಂನ ಎಲ್ಲಾ ರೀತಿಯ ಸೇವೆಗಳು ಅಂದರೆ ಪೇಟಿಎಂ ಆಲ್​ ಇನ್​​ ವನ್​ ಕ್ಯೂಆರ್​ ಕೋಡ್​, ಪೇಟಿಎಂ ಆಲ್​ ಇನ್​ ಒವ್​ ಪಿಒಎಸ್​ ಮಷಿನ್​ಗಳು, ಪೇಟಿಎಂ ಸೌಂಡ್​ಬಾಕ್ಸ್​, ಪೇಟಿಎಂ ಸಾಲ, ವಿಮಾ ಸೌಲಭ್ಯ ಹೀಗೆ ಇನ್ನೂ ಅನೇಕ ಉತ್ಪನ್ನಗಳನ್ನ ಬಳಸುವಂತೆ ಜನರಿಗೆ ಉತ್ತೇಜನ ನೀಡುತ್ತಾರೆ.

18 ವರ್ಷ ಮೇಲ್ಪಟ್ಟ 10 ಅಥವಾ 12ನೇ ತರಗತಿ ಉತ್ತೀರ್ಣರಾದ, ಸ್ಮಾರ್ಟ್​ ಫೋನ್​ ಹೊಂದಿರುವ ವ್ಯಕ್ತಿಯು ಈ ಹುದ್ದೆಗಾಗಿ ಪೇಟಿಎಂ ಆ್ಯಪ್​ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ದ್ವಿಚಕ್ರ ವಾಹನ, ಮಾರ್ಕೆಟಿಂಗ್​ ಹುದ್ದೆಯಲ್ಲಿ ಅನುಭವ ಹೊಂದಿದವರು ಹಾಗೂ ಸ್ಥಳೀಯ ಭಾಷೆಯಲ್ಲಿ ಉತ್ತಮ ಸಂವಹನ ಕೌಶಲ್ಯ ಹೊಂದಿದವರಿಗೆ ಆದ್ಯತೆ ನೀಡೋದಾಗಿ ಕಂಪನಿಯು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...